ಮಹಾತ್ಮರ ತತ್ವ ಸಿದ್ಧಾಂತ ಸರ್ವರಿಗೂ ಪ್ರೇರಣೆಯಾಗಲಿ: ಸಂಸದ ನಾಯಕ
ಗಾಂಧೀ ಸೇವಾ ಸಪ್ತಾಹದ ಅಂಗವಾಗಿ ಬಿಜೆಪಿಯಿಂದ ಪಾದಯಾತ್ರೆ
ಯಾದಗಿರಿ,ಶಹಾಪುರ: ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳು, ಪ್ರಸ್ತುತ ಯುವ ಪೀಳಿಗೆಗೆ ಹಾಗೂ ನಗರ ಗ್ರಾಮೀಣ ಪ್ರದೇಶದ ಜನರಿಗೆ ತಿಳಿಸುವುದು ಬಹುಮುಖ್ಯವಾಗಿದು, ಈ ದಿಸೆಯಲ್ಲಿ ಬಿಜೆಪಿವತಿಯಿಂದ ಎಲ್ಲಾ ಸಂಸದರ ಕೇತ್ರವ್ಯಾಪ್ತಿ ಸೇವಾ ಸಪ್ತಾಹದ ಅಂಗವಾಗಿ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ಬಿಜೆಪಿ ಹಮ್ಮಿಕೊಂಡ ಗಾಂಧಿ ಸಪ್ತಾಹ ಅಂಗವಾಗಿ ನಗರದಲ್ಲಿ ದಿಗ್ಗಿಬೇಸ್ ಅಗಸಿ ಹತ್ತಿರದ ಮರೆಮ್ಮಾ ದೇವಿ ದೇವಸ್ಥಾನದಿಂದ ಕೈಗೊಂಡ ಪಾದಯಾತ್ರೆಗೆ ಸಂಸದ ರಾಜಾ ಅಮರೇಶ್ವರ ನಾಯಕ ಚಾಲನೆ ನೀಡಿದರು.
ಬಾಪೂಜಿಯವರ ನಾಯಕತ್ವದಲ್ಲಿ ದೇಶ ಸ್ವಾತಂತ್ರ್ಯಗೊಳಿಸಲು ಸಾಕಷ್ಟು ಸಂಖ್ಯೆಯಲ್ಲಿ ಹೋರಾಟಗಾರರು ಶ್ರಮ ವಹಿಸಿದ್ದರ ಪರಿಣಾಮ ದೇಶ ಸ್ವಾತಂತ್ರ್ಯಗೊಂಡಿದ್ದು, ಪೂಜ್ಯರ ನೆನಪಿನಲ್ಲಿ ಅ.2 ರಿಂದ 31ರವರೆಗೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಾಂಧೀ ಸೇವಾ ಸಪ್ತಾಹ ಆಚರಿಲಾಗುತ್ತಿದೆ.
ಮಹಾತ್ಮ ಆಶಯದಂತೆ ಅವರು ಕಂಡಿದ್ದ ರಾಮ ರಾಜ್ಯದ ಕನಸು ನನಸಾಗಿಸಲು ಸರ್ವರು ಕೈಜೋಡಿಸಬೇಕು. ಅವರು ತೋರಿದಿ ಸನ್ಮಾರ್ಗದಲ್ಲಿ ನಡೆಯಬೇಕು. ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ನಡೆದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಮಾಜಿ ಶಾಸಕ ಗುರುಪಾಟೀಲ ಶಿರವಾಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಗೆ ಮಹತ್ವ ನೀಡಿದ್ದು, ಪರಿಸರಕ್ಕೆ ಅನುಕೂಲಕರ ವಾಗುವ ರೀತಿಯಲ್ಲಿ ಮರ ಗಿಡಗಳನ್ನು ಬೆಳೆಸಬೇಕು. ಗುರುತಿಸಿದ ಸ್ಥಳದಲ್ಲಿಯೇ ತ್ಯಾಜ್ಯ ವಿಲೇವಾರಿಯಾಗಬೇಕು. ಪ್ಲಾಸ್ಟಿಕ್ ಮುಕ್ತ ಭಾರತ ಮಾಡಬೇಕು ಎಲ್ಲೆಂದರಲ್ಲಿ ಕಸವÀನ್ನು ಎಸೆಯದೆ ಸ್ವಚ್ಛತೆಯ ನಗರವಾಗಿ ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.
ದಿಗ್ಗಿ ಬೇಸ್‍ನಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಹಳಿಸಗರದ ವಾಲ್ಮೀಕಿ ಚೌಕ್ ವರೆಗೆ ಯಾತ್ರೆಯು ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಬಿಜೆಪಿ ಹಿರಿಯ ಮುಖಂಡ ಮಲ್ಲಣ್ಣ ಮಡ್ಡಿ ಸಾಹು, ರಾಮಚಂದ್ರ ಕಾಶಿರಾಜ್ ವನದುರ್ಗ, ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಚಿಲ್ಲಾಳ, ನ್ಯಾಯಾವಾದಿ ಗೋಪಾಲ್, ಅತೀಕ್ ಸಿದ್ದಿಕಿ, ನಗರ ಅಧ್ಯಕ್ಷ ಲಾಲ್ ಅಹ್ಮದ್ ಖುರೇಶಿ, ಮಲ್ಲಯ್ಯ ಸ್ವಾಮಿ, ಅಪ್ಪಣ್ಣ ದಶವಂತ ಮುಖಂಡರಾದ ಮರೆಪ್ಪ ಹಯ್ಯಾಳÀಕರ, ಗುರು ಕಾಮಾ, ರಾಜೂ ಪತ್ತಾರ, ಡಾ.ಚಂದ್ರಶೇಖರ ಕೊಲ್ಲೂರು, ಬಸವರಾಜ ಆನೇಗುಂದಿ, ಶಕೀಲ್ ಮುಲ್ಲಾ, ಚಂದ್ರು ಯಾಳಗಿ, ಶಾಂತಪ್ಪ ಕಟ್ಟಿಮನಿ, ಮೋನಪ್ಪ ಕಿಣ್ಣಿ, ಪ್ರಶಾಂತ ಸಜ್ಜನ್, ಅಶೋಕ, ಅತೀಕ್ ಸಿದ್ಧಿಕಿ, ಸುನೀಲ್ ಹಳಿಸಗರ, ಭೀಮರಾಯ ಹಳಿಪೇಟ, ಸಣ್ಣಮಾನಯ್ಯ, ಬಸವರಾಜ ಕಣೆಕಲ್, ವಿರೇಶ್ ಅಡಿಕಿ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು.
ಗಾಂಧಿ ಸಪ್ತಾಹ ಅಂಗವಾಗಿ ಬಿಜೆಪಿ ಶುಕ್ರವಾರ ನಗರದಲ್ಲಿ ಕೈಗೊಂಡ ಪಾದಯಾತ್ರೆ ಪಟ್ಟಣದ ಗಾಂಧಿ ವೃತ್ತ ತಲುಪಿದಾಗ ನೂತನವಾಗಿ ಪ್ರತಿಷ್ಠಾಪಿಸಲಾದ ಗಾಂಧಿ ಪ್ರತಿಮೆಗೆ ಸಂಸದ ರಾಜಾ ಅಮರೇಶ್ವರ ನಾಯಕ ಮಾಲಾರ್ಪಣೆ ಮಾಡಿ ಗೌರವಿಸಿದರು.