ಕಾವ್ಯಾನುಸಂಧಾನದಲ್ಲಿ ಅಕ್ಕಿಯವರ ಕವನಗಳ ಕಲರವ
ರಾಜ್ಯೋತ್ಸವ ಪುರಸ್ಕೃತ ಅಕ್ಕಿಯವರಿಗೆ ಸನ್ಮಾನ
ಕಾವ್ಯಾನುಸಂಧಾನದಲ್ಲಿ ಅಕ್ಕಿಯವರ ಕವನಗಳ ಕಲರವ
yadgiri, ಶಹಾಪುರಃ ನಾಡಿನ ಖ್ಯಾತ ಸಾಹಿತಿ ಹಾಗೂ ಸಂಶೋಧಕ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಎನ್.ಅಕ್ಕಿ ಅವರನ್ನು ಸೃಜನಶೀಲ ಸಾಹಿತ್ಯ ಹಾಗೂ ಸಾಂಸ್ಕ್ರತಿಕ ಬಳಗ ಮತ್ತು ಜ್ಯೋತಿರ್ಗಮಯ ಸೇವಾ ಸಂಸ್ಥೆ ಶಹಾಪುರ ಇವರ ಆಶ್ರಯದಲ್ಲಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಲ್ಲದೆ ಇದೇ ಸಂದರ್ಭದಲ್ಲಿ ಡಿ.ಎನ್.ಅಕ್ಕಿಯವರ ರಚಿತವಾದ ಅನೇಕ ಮೌಲಿಕ ಕಾವ್ಯಗಳ ಅನುಸಂದಾನ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಯುವ ಬರಹಗಾರರು ಡಿ.ಎನ್.ಅಕ್ಕಿಯವರ ಕವನಗಳ ವಾಚನ ಮಾಡುವ ಮೂಲಕ ಅಕ್ಕಿಯವರ ಕಾವ್ಯ ಕಲರವ ಉಂಟಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಅಕ್ಕಿ, ಮುಂದೆ ನೋಡಿ ನಮ್ಮ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ನಿರಂತರವಾಗಿ ಮುಂದುವರೆಸಬೇಕು. ಯಾವುದೇ ಪ್ರಶಸ್ತಿ, ಸನ್ಮಾನಕ್ಕಾಗಿ ಅಲ್ಲ, ನಮ್ಮ ಶ್ರಮ, ಹಿರಿಮೆ ಗುರುತಿಸಿ ಪ್ರಶಸ್ತಿಗಳು ಮನೆ ಬಾಗಿಲಿಗೆ ಬರಲಿವೆ. ಆ ರೀತಿಯಾಗಿ ನಾವು ಸಾಹಿತ್ಯದಲ್ಲಿಯಾಗಲಿ ಯಾವುದೇ ಕೆಲಸದಲ್ಲಿ ಆಗಲಿ ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.
ತಡವಾದರೂ ಪರವಾಗಿಲ್ಲ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಾಹಿತ್ಯ ಕೃಷಿಯಲ್ಲಿ ಎತ್ತುಗಳು ಹೇಗೆ ಮುಂದೆ ನೋಡಿ ದುಡಿಯುತ್ತಿರುತ್ತವೆ. ಹಾಗೇ ದುಡಿಯುತ್ತಾ ತೆರಳಬೇಕು. ಒಂದಿಲ್ಲ ಒಂದು ದಿನ ಸಮಾಜ ಗುರುತಿಸುತ್ತದೆ. ಶ್ರಮ ಎಂದಿಗೂ ವ್ಯರ್ಥವಾಗದು ಎಂದರು.
ನಿಸ್ವಾರ್ಥ ಸೇವೆಗೆ ತಕ್ಕ ಗೌರವಾದರ ಒಲಿದು ಬರಲಿದೆ. ಇದನ್ನು ಯವುಕರು ಗಮನಿಸಬೇಕು. ಎಲ್ಲಾ ಗ್ರಂಥಗಳು ಓದಬೇಕು. ಸಂಶೋಧನಾತ್ಮಕವಾಗಿಯೂ ಶ್ರಮಿಸಬೇಕು. ಇತಿಹಾಸದ ಅರಿವಿಗಾಗಿ ಓದಬೇಕು. ಜ್ಞಾನದ ಬಲವಿದ್ದಲ್ಲಿ ಅದನ್ನು ಸಂಪೂರ್ಣವಾಗಿ ಚಲನೆಯಲ್ಲಿಡಬೇಕು. ಆಗ ಮನುಷ್ಯ ಸಾಧನೆಯ ಹಾದಿ ಕಡೆ ಸಾಗಲು ಸಾಧ್ಯವಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಚಿತ್ರ ಕಲಾವಿದ ರುದ್ರಪ್ಪ ತಳವಾರ, ಸಾಹಿತಿ ಡಿ.ಎನ್.ಅಕ್ಕಿಯವರ ಅಧ್ಯಯನದ ಶಿಸ್ತು, ಸಂಶೋಧನೆ ಅಪಾರವಾದ ಸಾಹಿತ್ಯ ಬರವಣಿಗೆ ಅಚ್ಚುಕಟ್ಟುತನದಿಂದ ಕೂಡಿದ್ದು, ಅಪರೂಪದ ಸಾಹಿತ್ಯ ಸಾಹಿತ್ಯ ಸಾಧಕರಾಗಿ, ಬದುಕು-ಬರಹ ಒಳ-ಹೊರ ಒಂದಾಗಿಸಿಕೊಂಡು ಮಾನವೀಯ ಸಂವೇದನೆಯ ಸಾಹಿತಿಯಾಗಿ ತುಂಬಾ ವಿಶಿಷ್ಠವಾಗಿ ಕಾಣುತ್ತಾರೆ ಎಂದರು. ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಯುವ ಬರಹಗಾರರು ಕೆಲಸ ಮಾಡುತ್ತಿದ್ದಾರೆ. ಸರಳ ವ್ಯಕ್ತಿತ್ವದ ಮೇರು ಪರ್ವತ ಅಕ್ಕಿಯವರನ್ನು ನಾವೆಲ್ಲ ಫಾಲೋ ಮಾಡಬೇಕಿದೆ ಎಂದರು.
ಕನ್ನಡ ಉಪನ್ಯಾಸಕಿ ನಿರ್ಮಲ ತುಂಬಿಗಿ ಅವರು ಬೆಳಕು ಬೀರು, ಶಿಕ್ಷಕಿ ಭಾಗ್ಯ ದೊರೆಯವರು ಅಹಂ ಬೇಡ, ಶರಣು ಕಲ್ಮನಿ ಸಂಭವಾಯಿ ಯುಗೆ ಯುಗೆ, ಚಿತ್ರಕಲಾವಿದ ಹಾಗೂ ಶಿಕ್ಷಕ ರುದ್ರಪ್ಪ ತಳವಾರ ಕರುನಾಡ ತಾಯಿ, ಕವಿಯತ್ರಿ ಲಕ್ಷ್ಮೀ ಪಟ್ಟಣಶೆಟ್ಟಿ ಅಂತ್ಯೋದಯ ಆಚಾರ್ಯ, ಕುಮಾರಿ ವೈಷ್ಣವಿ ನವಿಲೇ ನವಿಲೆ, ಭಾಗ್ಯ ಮಳೆಯ ಬಂದಿತ್ತು ಹೀಗೆ ಯುವ ಬರಹಗಾರರು ಡಿ.ಎನ್.ಅಕ್ಕಿ ಅವರು ಬರೆದ ಕಾವ್ಯಗಳನ್ನು ವಾಚಿಸಿದರು.
ಸಾಂಸ್ಕøತ ಬಳಗದ ಹಣಮಂತಿ ಗುತ್ತೇದಾರ, ಮಹೇಶ ಪತ್ತಾರ, ಗೌಡಪ್ಪಗೌಡ ಹುಲಕಲ್, ಡಾ.ಧರ್ಮಣ್ಣ ಬಡಿಗೇರ, ಡಾ.ಶೈಲಜಾ ಬಾಗೇವಾಡಿ, ತಿಪ್ಪಣ್ಣ ಕ್ಯಾತನಾಳ, ಕಾಮಣ್ಣ ಹುಣಸೂರ, ರಾಘವೇಂದ್ರ ಹಾರಣಗೇರಾ, ವಿಶಾಲ ಸಿಂಧೆ, ಸಆಹಿತಿ ವೀರಣ್ಣ ದೇಶರಡ್ಡಿ, ಶ್ರೀನಿವಾಸ ಕಶೆಟ್ಟಿ ಇತರರಿದ್ದರು.