ಸದನ ಗದ್ದಲ- ರಾಜ್ಯಪಾಲರ ಭಾಷಣ ಮೊಟಕು
ಸದನ ಗದ್ದಲ- ರಾಜ್ಯಪಾಲರ ಭಾಷಣ ಮೊಟಕು
ಬೆಂಗಳೂರಃ ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮೊದಲಿಗೆ ರಾಜ್ಯಪಾಲರು ಸದನ ಉದ್ದೇಶಿಸಿ ಭಾಷಣ ಆರಂಭಿಸುತ್ತಿದ್ದಂತೆ, ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ ಬಿಜೆಪಿ ಶಾಸಕರು,
ಸರ್ಕಾರ ಬಹುಮತವಿಲ್ಲದೆ ಅಧಿವೇಶನ ನಡೆಸುತ್ತಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣಕ್ಕೆ ತೀವ್ರ ಅಡ್ಡಿ ಪಡಿಸಿದ ಬಿಜೆಪಿಗರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹೀಗಾಗಿ ಭಾಷಣಕ್ಕೆ ಅಡ್ಡಿಯಾದ ಪರಿಣಾಮ ರಾಜ್ಯಪಾಲರು ತಮ್ಮ ಭಾಷವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಕೇವಲ ಎರಡು ಪುಟ ಓದಿದಿ ರಾಜ್ಯಪಾಲರು ಒಮ್ಮೆಲೆ ಕೊನೆಯ ಪುಟದ ಸಾಲುಗಳನ್ನು ಓದುವ ಮೂಲಕ 22 ಪುಟದ ಭಾಷಣವನ್ನು ಮುಗಿಸುತ್ತೇನೆ ಎಂಬುದಾಗಿ ತಿಳಿಸಿದರು.
ನಂತರ ಅಗಲಿದ ಪರಮ ಪೂಜ್ಯ ಡಾ.ಶಿವಕುಮಾರ ಸ್ವಾಮಿ ಮತ್ತು ಕೇಂದ್ರದ ಮಾಜಿ ಸಚಿವರಾದ ಜಾರ್ಜ್ ಫರ್ನಾಂಡೀಸ್ ಅವರಿಗೆ ಸಂತಾಪ ಸಲ್ಲಿಸಲಾಯಿತು.
ಸಿಎಂ ಕುಮಾರಸ್ವಾಮಿ ಮಾತನಾಡಿ,
ಡಾ.ಶಿವಕುಮಾರ ಸ್ವಾಮೀಜಿ ಅವರ ಕೊಡುಗೆ ಅವರ ಸಲ್ಲಿಸಿದ ಸೇವೆ ಕುರಿತು ಶಿಕ್ಷಣ, ವಸತಿ ಮತ್ತು ಅನ್ನ ದಾಸೋಹ ಕುರಿತು ಮತ್ತು ಫರ್ನಾಂಡೀಸ್ ಬಗ್ಗೆ ಪ್ರಸ್ತಾಪಿಸಿದರು.