ಸೃಷ್ಠಿ ಅರಳಿಸುವ ಶಕ್ತಿ ಸಂಗೀತಕ್ಕಿದೆಃ ಕಾಳಹಸ್ತೇಂದ್ರ ಶ್ರೀ
ಸಂಗೀತದಲ್ಲಿ ಅಗೋಚರ ಶಕ್ತಿ ಅಡಗಿದೆ
ಯಾದಗಿರಿಃ ಸಂಗೀತವು ಒಂದು ಅಗೋಚರ ಶಕ್ತಿಯಾಗಿದ್ದು, ಈ ಜೀವ ಜಗತ್ತಿನ ಸೃಷ್ಠಿ ಅರಳಿಸುವ ಶಕ್ತಿ ಈ ಸಂಗೀತ ನಾದಲೋಕಕ್ಕಿದೆ. ಸಂಗೀತವು ಮನುಷ್ಯನ ಮಾನಸಿಕ ದೈಹಿಕ ಆರೋಗ್ಯದ ಮುಂತಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಹೇಳಿದರು.
ಜಿಲ್ಲೆಯ ಶಹಾಪುರ ನಗರದಲ್ಲಿರುವ ವಿಶ್ವಕರ್ಮ ಏಕದಂಡಿಗಿ ಮಠದಲ್ಲಿ ಕಲಾ ವೈಭವ ಸೇವಾ ಸಂಸ್ಥೆ(ರಿ) ಗೋಗಿ ಪೇಠ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಡೆದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಂಗೀತ ಮನುಷ್ಯನ ಮನಸ್ಸಿನ ಮೇಲೇ ಪರಿಣಾಮ ಬೀರುತ್ತದೆ. ಅದರಿಂದ ಮನಸ್ಸು ಪ್ರಫುಲ್ಲತೆಗೊಳ್ಳುತ್ತದೆ. ಸಂಗೀತಕ್ಕೆ ಯಾವುದೇ ಜಾತಿಯಿಲ್ಲ. ಅದೊಂದು ಜೀವ ಜಗತ್ತು ಅರಳಿಸುವ ವೈವಿದ್ಯ ದೇವತೆಯಾಗಿದೆ ಎಂದರು.
ಕಲಾವಿದರಾದ ಬಸವರಾಜ ವಿಶ್ವಕರ್ಮ ಮತ್ತು ಕವಿತಾ ಪತ್ತಾರ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದತ್ತಪ್ಪ ಸಾಗನೂರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೈಷ್ಣವಿ ವಿಶ್ವಕರ್ಮ, ಶರಣು ವಠಾರ, ಚಂದ್ರಶೇಖರ ಗೋಗಿ, ಗಣೇಶ ಬಡಿಗೇರ, ಡಾ. ನಾಗರಾಜ, ಅಶೋಕ ಭಜಂತ್ರಿ, ನಾಗರಾಜ ಶಹಾಪೂರ, ಗುರು ಹುಣಚಿಗಿಡ, ಮಹೇಶ ಪತ್ತಾರ, ಮಲ್ಲಯ್ಯ ಹೀರೆಮಠ, ಬೂದಯ್ಯ ಹೀರೆಮಠ, ಡಾ. ಪ್ರಭು ಹೂಗಾರ, ರಾಘವೇಂದ್ರ ಪತ್ತಾರ, ಬಸವರಾಜ ವಿಶ್ವಕರ್ಮ, ನಾಗಯ್ಯ ಶಾಸ್ತ್ರಿ, ಚನ್ನಪ್ಪ ವಿಶ್ವಕರ್ಮ, ನಿಖಿತ ಹಾಗೂ ಸಂಜನಾ ಸೇರಿದಂತೆ ಇತರರಿದ್ದರು.
ಮಲ್ಲು ಶಹಾಪೂರ, ಬಸವರಾಜ ಹೈಯ್ಯಾಳ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಚಂದ್ರಾಮಪ್ಪ ದೋತ್ರೆ ಅಧ್ಯಕ್ಷೆವಹಿಸಿದರು. ರಾಜು ಬೊಮ್ಮನಹಳ್ಳಿ, ಮೌನೇಶ ಕೆಂಬಾವಿ, ಅರವಿಂದ ಉಪ್ಪಿನ, ಬಸವರಾಜ ಸೈದಾಪೂರ, ದೇವಿಂದ್ರ ಕನ್ಯಾಕೋಳೂರ, ಶಂಕರ ಪತ್ತಾರ ಇತರರು ಭಾಗವಹಿಸಿದ್ದರು.