ಪ್ರಮುಖ ಸುದ್ದಿ
ಕಲಬುರ್ಗಿಃಚಾಕುವಿನಿಂದ ಇರಿದು ಯುವಕನ ಹತ್ಯೆ
ಬ್ರಹ್ಮಪುರ ವ್ಯಾಪ್ತಿ ಹಾಡುಹಗಲೇ ಯುವಕನ ಕೊಲೆ
ಕಲಬುರ್ಗಿಃ ನಗರದ ಬ್ರಹ್ಮಪುರ ಬಡಾವಣೆಯಲ್ಲಿ ಯುವಕನೋರ್ವನ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಬ್ರಹ್ಮಪುರ ಬಡಾವಣೆಯ ರಾಯರ ಗುಡಿ ಸಮೀಪ ಘಟನೆ ಜರುಗಿದೆ.
ಸಂಗಮೇಶ ಸಿದ್ರಾಮಪ್ಪ ನಂದರಗ(32)
ಕೊಲೆಯಾದ ಯುವಕ.
ಗಾಯಗೊಂಡಿದ್ದ ಸಂಗಮೇಶನನ್ನು ಬಸವೇಶ್ವರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಆತ ಅಸುನೀಗಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ರಾಯರ ಗುಡಿ ಸುತ್ತ ಮುತ್ತಲಿನ ಬಡಾವಣೆ ಜನರು ಭಯಭೀತಗೊಂಡಿದ್ದಾರೆ.
ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.