ಪ್ರಮುಖ ಸುದ್ದಿ
ಅಡ್ಡ ಬಂದ ನಾಯಿ ಉಳಿಸಲು ಹೋಗಿ ಜೀವಕಳಕೊಂಡ ಚಾಲಕ
ಯಾದಗಿರಿಃ ಜಾತ್ರೆಗೆ ಹೊರಟಿದ್ದ ಟಂಟಂ ಆಟೋವೊಂದಕ್ಕೆ ಅಡ್ಡಲಾಗಿ ಬಂದ ನಾಯಿ ಉಳಿಸಲು ಹೋಗಿ ಟಂಟಂ ಪಲ್ಟಿಯಾಗಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಹಾವಿನಾಳ ಕ್ರಾಸ್ ಹತ್ತಿರ ನಡೆದಿದೆ.
ಟಂಟಂ ಚಾಲಕ ದೇವಪ್ಪ (26) ಮೃಯಪಟ್ಟ ದುರ್ದೈವಿ. ಟಂಟಂನಲ್ಲಿದ್ದ ಇತರೆ ಆರು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಸುರಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನವರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.