ಪ್ರಮುಖ ಸುದ್ದಿ
ತಿರುಪತಿ ತಿಮ್ಮಪ್ಪನ ಹುಂಡಿಗೆ 3 ಕೋಟಿಯ ವಜ್ರ, ಚಿನ್ನದ ಹಸ್ತ ಅರ್ಪಣೆ

5.3 ಕೆಜಿಯ ಚಿನ್ನ+ವಜ್ರದಿಂದ ಮಾಡಿದ ಹಸ್ತ ಮುದ್ರಿಕೆ ಹುಂಡಿಗೆ ಹಾಕಿದ ಅನಾಮಿಕ
ವಿವಿ ಡೆಸ್ಕ್ಃ ತಿರುಪತಿ ತಿಮ್ಮಪ್ಪನ ಹುಂಡಿಗೆ ಚಿನ್ನ, ವಜ್ರ, ಅಪಾರ ಬೆಲೆಬಾಳುವ ವಡವೆ ಸೇರಿದಂತೆ ಹಣ ಹಾಕೋದು ಸಾಮಾನ್ಯ.
ದೇಶದಲ್ಲಿಯೇ ಅತಿ ಶ್ರೀಮಂತ ದೇವರಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿತ್ಯ ಲಕ್ಷಾಂತರ ಭಕ್ತರು ಬರುತ್ತಾರೆ.
ಅಲ್ಲಿನ ತಿಮ್ಮಪ್ಪನ ಹುಂಡಿಗೆ (ಜೋಳಿಗೆ) ಭಕ್ತರು ಅವರವರ ಭಕ್ತಿ ಅನುಸಾರ ಹರಿಕೆಯಂತೆ ಚಿನ್ನ, ಬೆಳ್ಳಿ, ದುಡ್ಡು ಹಾಕುವದು ವಾಡಿಕೆ.
ಈ ಬಾರಿ ಅನಾಮಿಕ ಭಕ್ತನೋರ್ವ ಆ ತಿಮ್ಮಪ್ಪನ ಜೋಳಿಗೆಗೆ ಅಂದಾಜು 3 ಕೋಟಿ ರೂ.ಬೆಲೆ ಬಾಳುವ ವಜ್ರ ಹಾಗೂ ಚಿನ್ನದಿಂದ ತಯಾರಿಸಿದ ಆಕರ್ಷಕವಾದ ಹಸ್ತಮುದ್ರಿಕೆಯನ್ನು ಅರ್ಪಿಸಿದ್ದಾರೆ.
ಅದು ಸುಮಾರು 5.3 ಕೆಜಿ ಇದೆ ಎನ್ನಲಾಗಿದೆ. ಇಷ್ಟೊಂದು ಬೆಲೆ ಬಾಳುವ ಹಸ್ತ ಮುದ್ರಿಕೆಯನ್ನು ಅರ್ಪಿಸಿದ ಭಕ್ತ ಯಾರೆಂಬುದು ಮಾತ್ರ ತಿಳಿದು ಬಂದಿಲ್ಲ.