ಪ್ರಮುಖ ಸುದ್ದಿ
ಈ ದರೋಡೆಕೋರರ ಪ್ಲಾನ್ ಕೇಳಿ ಪೊಲೀಸರೇ ಸುಸ್ತು!
ಕಲಬುರಗಿ : ರಾಜ್ಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಮೂವರನ್ನು ಆಳಂದ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಆಳಂದ ತಾಲೂಕಿನ ಶಖಾಪುರ ತಾಂಡಾದ ವಿಜಯ, ಸಿದ್ಧರಾಮ್ ಹಾಗೂ ರಾಮ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ಬೈಕ್, ರಾಡ್ , ಖಾರದ ಪುಡಿ ಮತ್ತು ಹಗ್ಗವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಿದಾಗ ಬೆಚ್ಚಿಬೀಳುವ ಸರದಿ ಪೊಲೀಸರದ್ದಾಗಿತ್ತು. ಕಾರಣ ಈ ದರೋಡೆಕೋರರು ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಹಾಕಿ ವಾಹನಗಳನ್ನು ತಡೆಯುತ್ತಿದ್ದರಂತೆ. ಬಳಿಕ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದರಂತೆ. ಈಗಾಗಲೇ ಕೆಲ ದರೋಡೆ ಪ್ರಕರಣಗಳಲ್ಲಿ ಭಾಗಿ ಆಗಿರೋದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಮತ್ತೊಂದು ದರೋಡೆಗೆ ಸಿದ್ಧವಾಗಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.