ಪ್ರಮುಖ ಸುದ್ದಿ
ಬೆಂಗಳೂರು ನಗರದಲ್ಲಿ ನಿಷೇದಾಗ್ನೆ ಜಾರಿ!
ಬೆಂಗಳೂರು : ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಪತನಕ್ಕೆ ಕ್ಷಣಗಣನೆ ಶುರುವಾಗಿದೆ. ಪಕ್ಷೇತರ ಶಾಸಕರನ್ನು ಸದನಕ್ಕೆ ಕರೆತರುವ ಕಾರಣ ಖಾಸಗಿ ಅಪಾರ್ಟ್ಮೆಂಟ್ ಒಂದರ ಬಳಿ ಕಾಂಗ್ರೆಸ್ ಮತ್ತು ಕಮಲ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ಮತ್ತೊಂದು ಕಡೆ ಮುಂಜಾಗೃತ ಕ್ರಮವಾಗಿ ಇಂದು ಸಂಜೆ 6 ಗಂಟೆಯಿಂದ ಎರಡು ದಿನಗಳ ಕಾಲ ಬೆಂಗಳೂರು ನಗರದಲ್ಲಿ ನಿಷೇದಾಗ್ನೆ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅಲೋಕಕುಮಾರ್ ಮಾಹಿತಿ ನೀಡಿದ್ದಾರೆ.
ಇಂದು ಸಂಜೆಯಿಂದಲೇ ಎರಡು ದಿನಗಳ ಕಾಲ ಬಾರ್ ಮತ್ತು ಪಬ್ ಗಳು ಬಂದ್ ಆಗಲಿವೆ. ಅಂತೆಯೇ ಜನರು ಗುಂಪಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅಲೋಕಕುಮಾರ್ ತಿಳಿಸಿದ್ದಾರೆ.