ಬಸವಭಕ್ತಿ
ಶಹಾಪುರಃ ಶ್ರೀಆಂಜನೇಯ ಮೂರ್ತಿ ಪ್ರತಿಷ್ಠಾಪನೆ
ಹೋಮ ಹವನ ಧಾರ್ಮಿಕ ಕಾರ್ಯಕ್ರಮ
ಯಾದಗಿರಿ, ಶಹಾಪುರಃ ಪಟ್ಟಣದ ದೇವಿ ನಗರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಶ್ರೀ ಆಂಜನೇಯ ಮೂರ್ತಿ ಸ್ಥಾಪನೆ ಅಂಗವಾಗಿ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ನೂತನ ಮೂರ್ತಿಯನ್ನು ಬಡಾವಣೆಯ ಮಹಿಳೆಯರು ಕುಂಭದೊಂದಿಗೆ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆ ತರಲಾಯಿತು.
ಗುರುವಾರ ಶ್ರೀ ಆಂಜನೇಯ ಮೂರ್ತಿಯನ್ನು ಶ್ರದ್ಧಾ ಭಕ್ತಿ ಪೂರ್ವಕ ಪ್ರತಿಷ್ಠಾಪಿಸಲಾಯಿತು. ಪೂಜಾ ಕಾರ್ಯಕ್ರಮ ಅಂಗವಾಗಿ ಪ್ರಸಾದ ವ್ಯವಸ್ಥೆಯು ಕಲ್ಪಿಸಲಾಗಿತ್ತು.
ಬಡಾವಣೆಯ ನಾಗರಿಕರು ಸೇರಿದಂತೆ ಭಕ್ತಾಧಿಗಳು ಆಗಮಿಸಿ ಶ್ರೀದೇವರ ದರ್ಶನ ಪಡೆದು ಪ್ರಸಾದ ಸೇವನೆ ಮಾಡಿದರು.