ಪ್ರಮುಖ ಸುದ್ದಿ
ಸಿದ್ರಾಮಯ್ಯನವರ ಅಹಂಕಾರದ ಮಾತು ಸಂವಿಧಾನ ಪೀಠಕ್ಕೆ ಅಗೌರವ-ಶೆಟ್ಟರ್
ವಿವಿ ಡೆಸ್ಕ್ಃ ಸಿದ್ರಾಮಯ್ಯನವರ ಅಹಂಕಾರದ ಮಾತು ಸಂವಿಧಾನ ಪೀಠಕ್ಕೆ ಅಗೌರವ ತೋರುತ್ತಿದೆ. ಸಂವಿಧಾನ ಪೀಠವಾದ ಸ್ಪೀಕರ್ ಸ್ಥಾನ ಅಲಂಕರಿಸಿದ ಕಾಗೇರಿಯವರನ್ನು ಏಕವಚನದಲ್ಲಿ ನಿಂದಿಸುವದು ಎಷ್ಟರಮಟ್ಟಿಗೆ ಸರಿ. ಸ್ಪೀಕರ್ ಅವರನ್ನು ಅವನ್ಯಾವನೋ ಅಂವ ಸ್ಪೀಕರ್ ಅಂತ ಸಂಬೋಧಿಸುವ ನಿಮ್ಮ ಅಹಂಕಾರ, ನಿಮ್ಮ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸಿ ಕೊಡುತ್ತದೆ ಎಂದು ಮಾಜಿ ಸಿಎಂ ಜಗಧೀಶ ಶೆಟ್ಟರ್ ಟ್ವಿಟ್ ಮೂಲಕ ಕಿಡಿಕಾರಿದ್ದಾರೆ.
ಅಹಂಕಾರದ ಮಾತು ಸಂವಿದಾನದ ಪೀಠಕ್ಕೆ ತೋರಿದ ಅಗೌರವ, ಇದುವೇ ಕಾಂಗ್ರೆಸ್ ಸಂಸ್ಕೃತಿಯ ಪ್ರತಿಬಿಂಬ. ಸಭಾಧ್ಯಕ್ಷರ ಪೀಠಕ್ಕೆ ಗೌರವ ಕೊಡಬೇಕಾದ ಕನಿಷ್ಟ ಜ್ಞಾನವೂ ಇಲ್ಲದ ನಿಮ್ಮನ್ನು ಕಾಂಗ್ರೆಸ್ ಹೈಕಮಾಂಡ್ ಅದ್ಹೇಗೆ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೋ.. ವಿಪರ್ಯಾಸ ಎಂದು ಜರಿದಿದ್ದಾರೆ.