ವೀ-ಲಿಂ ಪ್ರತ್ಯೇಕ ಕೂಗೇಳಲು ನಾನೇ ಕಾರಣ-ದಾವಣಗೆರೆ ಧಣಿ
ಪ್ರತ್ಯೇಕ ಧರ್ಮ ಗಲಾಟೆಗೆ ನಾನೇ ಕಾರಣ-ಶಾಮನೂರ
ಮೈಸೂರಃ ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ಬಗ್ಗೆ ರಾಜ್ಯಾದ್ಯಂತ ಕೂಗೇಳಲು ಒಂದು ರೀತಿಯಲ್ಲಿ ನಾನೇ ಕಾರಣ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ದಾವಣಗೇರಿ ಧಣಿ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಚಾಮುಂಡಿ ಬೆಟ್ಟದ ಪ್ರದೇಶದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗ ಒಕ್ಕೂಟ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಮತ್ತು ಕರ್ನಾಟಕ ರಾಜ್ಯ ವೀರಶೈವ-ಲಿಂಗಾಯತ ಸಚಿವರು, ಸಂಸದರು, ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು ಎಂಬ ಆದೇಶ ಹೊರಡಿಸಿದಾಗ ವೀರಶೈವ ಮಹಾಸಭಾ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ವೀರಶೈವ-ಲಿಂಗಾಯತ ವಿಷಯ ಕುರಿತು ಪ್ರಸ್ತಾಪಿಸಲಾಗಿತ್ತು.
ಹೀಗಾಗಿ ಪ್ರತ್ಯೇಕ ಧರ್ಮ ಬೇಡಿಕೆಗೆ ಅಂದು ವೇದಿಕೆಯಲ್ಲಿ ಸಣ್ಣ ಪ್ರಮಾಣದಲ್ಲಿ ಧ್ವನಿ ವರ್ಧಿಸಲಾಗಿತ್ತು. ಅದು ಪ್ರಸಕ್ತವಾಗಿ ರಾಜ್ಯದಾಧ್ಯಂತ ದೊಡ್ಡ ಪ್ರಮಾಣವಾಗಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದು ರೀತಿಯಲ್ಲಿ ನಾವೇ ತಪ್ಪು ಮಾಡಿದ್ದು ಎಂದು ತಿಳಿಸಿದರು.
ಅಂದು ಆರಂಭವಾದ ಕೂಗು ಚುನಾವಣೆಯ ಸಂದರ್ಭದಲ್ಲಿ ದೊಡ್ಡದಾಗಿ ಅಲೆ ಸೃಷ್ಟಿಸಿ, ಈಗ ತಣ್ಣಗಾಗಿದೆ. ಎಲ್ಲರೂ ಒಂದಾಗಿ ವೀರಶೈವ ಲಿಂಗಾಯತ ಒಂದೇ ಭಾವನೆಯಿದೆ ಬೇರೆಯಾಗುವದಿಲ್ಲ. ಸಮಾಜದ ಅಭಿವೃದ್ಧಿಗೆ ಸಮಾಜದ ಹಿರಿಯರು ಕಿರಿಯರು ಶ್ರಮಿಸಬೇಕು ಎಂದು ಕರೆ ನೀಡಿದರು.