ಪ್ರಮುಖ ಸುದ್ದಿ
ಆರ್.ಆರ್. ಮತ್ತು ಶಿರಾ ಕ್ಷೇತ್ರದಲ್ಲಿ ಬಹುತೇಕ ಬಿಜೆಪಿ ಗೆಲವು.?
RR ನಗರಃ 3 ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ
ಬೆಂಗಳೂರಃ ಇಲ್ಲಿನ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಗಿದು ಇಂದು ಮತ ಎಣಿಕೆ ಆರಂಭವಾಗಿದ್ದು, ಸತತ ಮೂರನೇಯ ಹಂತದ ಮತ ಎಣಿಕೆಯಲ್ಲೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
6418 ಮತಗಳ ಅಂತರವನ್ನು ಬಿಜೆಪಿ ಕಾಪಾಡಿಕೊಂಡಿದೆ. ಬಿಜೆಪಿ-_15,110, ಕಾಂಗ್ರೆಸ್- 8692, ಜೆಡಿಎಸ್ – 784 ಮತಗಳನ್ನು 3 ನೇ ಹಂತದ ಮತ ಎಣಿಕೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿ ಗಳು ಪಡೆದುಕೊಂಡಿದ್ದಾರೆ.
ಶಿರಾದಲ್ಲೂ ಬಿಜೆಪಿ ಮುನ್ನಡೆಃ
ಶಿರಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಡಾ.ರಾಜೇಶಗೌಡ ಸತತ ಮೂರನೇಯ ಸುತ್ತಿನಲೂ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ-6436, ಕಾಂಗ್ರೆಸ್- 4729, ಜೆಡಿಎಸ್- 2714 ಮತಗಳನ್ನು ಮೂರನೇಯ ಹಂತದಲ್ಲಿ ಪಡೆದುಕೊಂಡಿವೆ. ಬಹುತೇಕ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸುವ ಲಕ್ಷಣಗಳು ಕಂಡು ಬರುತ್ತಿವೆ.