Homeಅಂಕಣಮಹಿಳಾ ವಾಣಿ

ರುಚಿಕರವಾದ ಚಿಕನ್‌ ಪೆಪ್ಪರ್‌ ಫ್ರೈ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು…

  • ಕೋಳಿಮಾಂಸ – 1/2 ಕೆಜಿ
  • ಕಾಳುಮೆಣಸಿನಪುಡಿ – 1 ಚಮಚ
  • ದನಿಯಾಪುಡಿ – 2 ಚಮಚ
  • ಅಚ್ಚಖಾರದ ಪುಡಿ- ಅರ್ಧ ಚಮಚ
  • ಈರುಳ್ಳಿ – 2
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
  • ಹಸಿಮೆಣಸಿನಕಾಯಿ – 2
  • ಕೊತ್ತಂಬರಿಸೊಪ್ಪು – ಸ್ವಲ್ಪ
  • ಕರೀಬೇವು – ಸ್ವಲ್ಪ
  • ಅರಿಸಿನಪುಡಿ – ಚಿಟಿಕೆ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಚಕ್ಕೆ-ಲವಂಗ ಪುಡಿ- ಕಾಲು ಚಮಚ
  • ಮಾಡುವ ವಿಧಾನ…

    ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಈರುಳ್ಳಿ, ಕರಿಬೇವು, ಹಸಿಮೆಣಸಿನ ಕಾಯಿ ಹಾಕಿ. ಈರುಳ್ಳಿ ಕೆಂಪಗಾಗುತ್ತಿದ್ದಂತೆಯೇ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ.

    2 ನಿಮಿಷದ ಬಳಿಕ ಕೋಳಿಮಾಂಸ ಹಾಗೂ ಉಪ್ಪು ಹಾಕಿ 5 ನಿಮಿಷ ಫ್ರೈ ಮಾಡಿ, ಬಳಿಕ ಕಾಳು ಮೆಣಸಿನ ಪುಡಿ, ದನಿಯಾ ಪುಡಿ, ಅಚ್ಚ ಖಾರದ ಪುಡಿ ಹಾಗೂ ಚಕ್ಕೆ-ಲವಂಗ ಪುಡಿ ಹಾಕಿ. ಸ್ವಲ್ಪ ನೀರು ಹಾಕಿ 5 ನಿಮಿಷ ಬೇಯಲು ಬಿಡಿ. ಇದೀಗ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ಪೆಪ್ಪರ್‌ ಚಿಕನ್ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button