ಪ್ರಮುಖ ಸುದ್ದಿ

ದುಷ್ಟರ ನಿಗ್ರಹ ಶಿಷ್ಟರ ರಕ್ಷಣೆ ಇಲಾಖೆ ನನಗೆ ದೊರೆತಿದೆ-ಬೊಮ್ಮಾಯಿ

ದುಷ್ಟರ ನಿಗ್ರಹ ಶಿಷ್ಟರ ರಕ್ಷಣೆಗೆ ದೇವಿ ಆಶೀರ್ವಾದ ಅಗತ್ಯ

ಶಿಗ್ಗಾಂವಿಃ ದುಷ್ಟರ ಶಕ್ತಿಗಳನ್ನು ನಿಗ್ರಹಿಸುವ ಶಿಷ್ಟರನ್ನು ರಕ್ಷಣೆ ಕಾನೂನು ಪರಿಪಾಲನೆ ಮಾಡುವ ಇಲಾಖೆ ನನಗೆ ದೊರೆತಿದೆ. ಇದರಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಶಕ್ತಿ ದೇವತೆಯ ಆಶೀರ್ವಾದ ಅಗತ್ಯವಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ದ್ಯಾವಮ್ಮ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸರ್ಕಾರ ರಚನೆ ಮಾಡಿದ ಮೇಲೂ ನನಗೆ ಯಾವ ಇಲಾಖೆ ದೊರೆಯಲಿದೆ ಎಂಬುದು ನನಗೆ ತಿಳಿದಿರಲಿಲ್ಲ.
ಇಲಾಖೆ ದೊರೆತ ಮೇಲೆ ದೇವಿಯ ದರ್ಶನ ಪಡೆದುಕೊಂಡು ಗೃಹ ಇಲಾಖೆಯಂತ ಖಾತೆ ನನಗೆ ದೊರೆತಿದೆ.ದುಷ್ಟರನ್ನು ನಿಗ್ರಹಿಸುವಲ್ಲಿ ಮತ್ತು ಶಿಷ್ಟರನ್ನು ರಕ್ಷಿಸುವ ಕಾನೂನುರ ಪರಿಪಾಲನೆ ಮಾಡುವ ಶಕ್ತಿ ನನಗೆ ಕರುಣಿಸು ದೇವಿ ಎಂದು ಬೇಡಿಕೊಂಡಿದ್ದೇನೆ.

ಹೀಗಾಗಿ ಈಗಲೂ ಜನತೆಯ ಮುಂದೆ ದೇವಿಯ ಸನ್ನಿಧಿಯಲ್ಲಿ ನಿಂತು ನಾನು ಹೇಳುತ್ತಿದ್ದೇನೆ. ಗೃಹ ಇಲಾಖೆಯಲ್ಲಿ ಅನ್ಯಾಯ ಅಪಚಾರ ನಡೆಯದಂತೆ ನೋಡಿಕೊಳ್ಳುವ ಭರವಸೆಯನ್ನು ನಿಮಗೆ ನೀಡ ಬಯಸುತ್ತೇನೆ. ನನ್ನ ಕ್ಷೇತ್ರದ ಜನತೆಗೆ ಚ್ಯುತಿ ಬರದಂತೆ ನಾನು ನಡೆದುಕೊಳ್ಳುವೆ. ಅಧಿಕಾರ ಬರುತ್ತದೆ ಹೋಗುತ್ತದೆ, ಜನರೊಂದಿಗೆ ಬೆರೆತು ನನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುವೆ.

ಜನರ ಆಶೀರ್ವಾದ ಎಲ್ಲಿವರೆಗೆ ಇರುತ್ತದೆ ಅಲ್ಲಿವರೆಗೂ ನಾನು ಅಭಿವೃದ್ಧಿಯ ನಿಜವಾದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುತ್ತೇವೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button