ಕೇದಾರನಾಥ ದೇವಾಲಯ ಬುಧವಾರ ಓಪನ್ – ದರ್ಶನಕ್ಕೆ ಅವಕಾಶವಿಲ್ಲ
ವಿವಿ ಡೆಸ್ಕ್ಃ ಪವಿತ್ರ ಮಂದಿರದ ಪವಿತ್ರ ಪೋರ್ಟಲ್‌ಗಳನ್ನು ಬುಧವಾರ ಬೆಳಿಗ್ಗೆ ತೆರೆಯಲಿರುವ ಕಾರಣ ಉತ್ತರಾಖಂಡದ ಕೇದಾರನಾಥ ದೇವಾಲಯವನ್ನು ಅಲಂಕರಿಸಲಾಗುತ್ತಿದೆ.
ದೇವಾಲಯದ ದ್ವಾರಗಳನ್ನು ತೆರೆಯುವಾಗ ದೇವಾಲಯದ ಪ್ರಧಾನ ಅರ್ಚಕ ಸೇರಿದಂತೆ 16 ಜನರು ಮಾತ್ರ ಹಾಜರಿರುತ್ತಾರೆ. ಆದರೆ, ಕರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಕ್ತರಿಗೆ ‘ದರ್ಶನ’ ಲಭ್ಯವಿರುವದಿಲ್ಲ.
ಇಂದು ಮುಂಚೆಯೇ, ಕೇದಾರನಾಥ ಮುಖ್ಯ ಅರ್ಚಕ ಮತ್ತು ಕೆಲವು ಅನುಯಾಯಿಗಳು ಬಾಬಾ ಕೇದಾರನಾಥರ ವಿಗ್ರಹವನ್ನು ತೆಗೆದುಕೊಂಡರು. ಕೇದಾರನಾಥ ಮುಖ್ಯ ಅರ್ಚಕ ಮತ್ತು ಗುಂಪು ಭಾನುವಾರ ಬೆಳಿಗ್ಗೆ ಬಾಬ ಕೇದಾರನಾಥರ ‘ಡೋಲಿ’ (ಪಲ್ಲಕ್ಕಿ) ಯೊಂದಿಗೆ ಗದ್ದಿಸ್ತಾಲ್ ನಿಂದ ಗೌರಿಕುಂದ್‌ಗೆ ತೆರಳಿದರು. ‘ಯಾತ್ರೆ’ ಭಾಗಶಃ ಗೌರಿಕುಂಡ್ ತನಕ ವಾಹನದಿಂದ ತೆರಳಿದ್ದು, ಆ ನಂತರ ಅಲ್ಲಿಂದ ಮೇಲೆ ಕಾಲ್ನಡಿಗೆಯಲ್ಲಿ ಕೇದಾರನಾಥ ಧಾಮಕ್ಕೆ ತೆರಳಲಾಯಿತು.
ಮೇ 14 ರಂದು ಕೇದಾರನಾಥ ದೇವಾಲಯದ ಪೋರ್ಟಲ್‌ಗಳನ್ನು ಯಾತ್ರಿಕರಿಗಾಗಿ ತೆರೆಯಲಾಗುವುದು ಎಂದು ಉತ್ತರಾಖಂಡ ಸಂಸ್ಕೃತಿ ಸಚಿವ ಸತ್ಪಾಲ್ ಮಹಾರಾಜ್ ಸೋಮವಾರ ಪ್ರಕಟಿಸಿದ್ದಾರೆ.
ತೀರ್ಥಯಾತ್ರೆಯ ದಿನಾಂಕಗಳನ್ನು ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ನಿರ್ಧರಿಸಲಾಗುತ್ತದೆ ಮತ್ತು ಹಿಂದೂ ಪಂಚಾಂಗ್ ಪ್ರಕಾರ ಓಂಕಾರೇಶ್ವರ ದೇವಸ್ಥಾನದ ಪುರೋಹಿತರ ಸಮ್ಮುಖದಲ್ಲಿ, ಭೀಮಾಶಂಕರ್ ಶಿವ್ಲಿಂಗ್ ರಾವಲ್ ಉಪಸ್ಥಿತಿಯಲ್ಲಿ ಪ್ರಕಟಿಸಲಾಗುತಿತ್ತು.
ಆದಾಗ್ಯೂ, ಈ ವರ್ಷ ಅಧಿಕಾರಿಗಳು ಕರೋನ ವೈರಸ್ ಎಲ್ಲಡೆ ಹಬ್ಬಿರುವ ಕಾರಣ ತೀರ್ಥಯಾತ್ರೆಯನ್ನು ಮುಂದೂಡಲು ಮತ್ತು ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೋಗ ಹರಡುವುದನ್ನು ತಡೆಗಟ್ಟಲು ಸಾಮಾಜಿಕ ದೂರವಿಡುವ ಮಾನದಂಡಗಳನ್ನು ಕಾಯ್ದುಕೊಳ್ಳಲು ನಿರ್ಧರಿಸಿದ್ದರು.
ಉತ್ತರಾಖಂಡದಲ್ಲಿ ಈವರೆಗೆ 51 ಕರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 33 ಪ್ರಕರಣಗಳು ಈಗಾಗಲೇ ಚೇತರಿಸಿಕೊಂಡಿವೆ. ವೈರಸ್‌ನಿಂದ ಹಿಮಾಲಯನ್ ರಾಜ್ಯದಲ್ಲಿ ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.




