ಶಹಾಪುರಃ ಗೃಹರಕ್ಷಕ ಸಿಬ್ಬಂದಿಗೆ ಕೊರೊನಾ ಜನರಲ್ಲಿ ಆತಂಕ
ಗೃಹರಕ್ಷಕ ಸಿಬ್ಬಂದಿಗೆ ಕೊರೊನಾ ಜನರಲ್ಲಿ ಆತಂಕ
ಶಹಾಪುರಃ ತಾಲೂಕಿನ ಗೋಗಿ(ಕೆ) ಗ್ರಾಮ ನಿವಾಸಿ ಗೃಹ ರಕ್ಷಕ ದಳದ ಸಿಬ್ಬಂದಿಯೋರ್ವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಮೂರು ತಿಂಗಳಿಂದಲೂ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಪರಿಣಾಮ ಕೇಂದ್ರ ಸರ್ಕಾರ ಘೋಷಿಸಿದ್ದ ಲಾಕ್ ಡೌನ್ ನಿಯಮದಂತೆ, ಅನ್ಯ ರಾಜ್ಯಗಳಿಗೆ ತೆರಳಿದ್ದ ನಮ್ಮ ರಾಜ್ಯದ ವಲಸಿಗರನ್ನು ಕ್ವಾರಂಟೈನ್ ಕೇಂದ್ರದಲ್ಲಿ 14 ದಿನಗಳ ಕಾಲ ಇಟ್ಟು ಸಮರ್ಪಖ ಚಿಕಿತ್ಸೆ ತಪಾಸಣೆ ನಡೆಸಲಾಗುತಿತ್ತು, ಆ ವೇಳೆ ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಎನ್ನಲಾದ ಗೃಹರಕ್ಷಕ ದಳದ ಸಿಬ್ಬಂದಿಯೋರ್ವನಿಗೆ ಕೊರೊನಾ ಸೋಂಕು ಅಂಟಿರುವ ಕಾರಣ ಇಡಿ ಗ್ರಾಮದಲ್ಲಿ ಕೊರೊನಾ ಭಯ ಆವರಿಸಿದೆ.
ಗೃಹ ರಕ್ಷಕದಳ ಸಿಬ್ಬಂದಿಯ ಸ್ವಾಬ್ ಟೆಸ್ಟಿಂಗ್ ಕಳುಹಿಸಲಾಗಿದ್ದು, ವರದಿ ಬರುವ ನೀರಿಕ್ಷೆಯಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. ವರದಿ ವಿಳಂಬವಾಗುತ್ತಿದ್ದು, ಜನತೆಯ ಆತಂಕವು ಹಎಚ್ಚಾಗುತ್ತಿದೆ.
ಕೊರೊನಾ ಸೋಂಕಿತ ಗೃಹರಕ್ಷಕ ಮನೆ ಸೇರಿದಂತೆ ಆತ ಗ್ರಾಮದಲ್ಲಿ ಓಡಾಡಿದ್ದು, ಅಲ್ಲದೆ ಗ್ರಾಮದ ಹಲವಾರು ಜನಸಾಮಾನ್ಯರ ಸಂಪರ್ಕ ಪಡೆದಿದ್ದಾನೆ ಎಂದು ಹೇಳಲಾಗುತ್ತಿದೆ. ಆತ ವಾಸಿಸುವ ಬಡಾವಣೆ ಸಂಪೂರ್ಣ ಸೀಲ್ ಡೌನ್ ಮಾಡಿದ್ದು, ಯಾರೊಬ್ಬರು ಸಂಚರಿಸದಂತೆ ಎಚ್ಚರಿಸಲಾಗಿದೆ.
ಇಷ್ಟಾದರೂ ಗ್ರಾಮದಲ್ಲಿ ಸ್ವಚ್ಛತಾ ಮತ್ತು ದ್ರಾವಣ ಸಿಂಪರಣೆ ಕೆಲಸ ಮಾಡದ ಗ್ರಾಮ ಪಂಚಾಯತ್ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ಬಡಾವಣೆ ಸೇರಿದಂತೆ ವೈರಸ್ ಸೋಂಕಿತನ ಮನೆ ಪೂರ್ಣ ದ್ರಾವಣ ಸಿಂಪಡಿಸಬೇಕು. ಅಲ್ಲದೆ ಗ್ರಾಮದ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.