ಪ್ರಮುಖ ಸುದ್ದಿ
BREAKING NEWS-ತಿದ್ದುಪಡಿ ಪೌರತ್ವ ಮಸೂದೆಃ ಅಸ್ಸಾಂನಲ್ಲಿ ಪ್ರತಿಭಟನೆ 3 ಬಲಿ
ಅಸ್ಸಾಂ ಗುವಾಹಟಿಃ ಪೌರತ್ವ (ತಿದ್ದುಪಡಿ) ಮಸೂದೆ 2019 ಜಾರಿಯಾದ ಹಿನ್ನೆಲೆಯಲ್ಲಿ ಅಸ್ಸಾಂ ರಾಜ್ಯದಲ್ಲಿ ಅಕ್ರಮ ವಲಿಸಗರ ಪ್ರತಿಭಟನೆ ಹಿಂಸಾರೂಪ ತಾಳಿದೆ. ಕೇಂದ್ರ ಸರ್ಕಾರ ಮುಂಜಾಗೃತವಾಗಿ ಘೋಷಿಸಿದ ಕರ್ಫ್ಯೂ, ನಿಷೇಧಾಜ್ಞೆ ದಿಕ್ಕರಿಸಿದ ಜನರು ರಸ್ತಗಿಳಿದು ಬೃಹತ್ ಪ್ರತಿಭಟನೆ ಕೈಗೊಂಡ ಪರಿಣಾಮ ಪೊಲೀಸರು ನಡೆಸಿದ ಗುಂಡಿನ ದಾಳಿಗೆ 3 ಜನ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ನಿಷೇದಾಜ್ಞೆ ಲೆಕ್ಕಿಸದೆ ಜನ ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆಗೆ ಇಳಿದ ಪರಿಣಾಮ ಘರ್ಷಣೆಗೆ ಕಾರಣವಾಯಿತು ಎನ್ನಲಾಗಿದೆ. ಗುವಾಹಟಿಯಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ 3 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಅಸ್ಸಾಂನಲ್ಲಿ ಬಾಂಗ್ಲಾ, ಪಾಕಿಸ್ತಾನ ಸೇರಿದಂತೆ ವಿವಿಧಡೆಯಿಂದ ಲಕ್ಷಾಂತರ ಜನ ಅಕ್ರಮ ವಲಿಸಗರು ವಾಸಿಸುತ್ತಿದ್ದಾರೆ. ಅವರಿಗೆಲ್ಲ ಈಗ ಭಾರತೀಯ ಪೌರತ್ವ ನೀಡಲಾಗುವದಿಲ್ಲ ಎಂಬ ಕಾರಣಕ್ಕೆ ಈ ಘರ್ಷಣೆ ನಡೆದಿದೆ ಎನ್ನಲಾಗಿದೆ.