Homeಜನಮನಪ್ರಮುಖ ಸುದ್ದಿ

ಪೊಲೀಸ್ ಠಾಣೆಯಲ್ಲಿ ಬಾಲಕ ಮತ್ತು ಆತನ ಅಜ್ಜಿ ಮೇಲೆ ಅಮಾನುಷವಾಗಿ ಹಲ್ಲೆ! ಏನಿದು ಪ್ರಕರಣ?

ಮಧ್ಯಪ್ರದೇಶ : ಮಧ್ಯಪ್ರದೇಶದ ರೈಲ್ವೇ ಪೊಲೀಸ್ ಠಾಣೆಯೊಳಗೆ 15 ವರ್ಷದ ದಲಿತ ಬಾಲಕ ಮತ್ತು ಆತನ ಅಜ್ಜಿಯನ್ನು ಅಧಿಕಾರಿಗಳು ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವಿವಾದಕ್ಕೆ ಕಾರಣವಾದ ಹಿನ್ನಲೆ ಒಬ್ಬ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

2023 ರ ಅಕ್ಟೋಬರ್‌ನಿಂದ ನಡೆದಿರುವ ವಿಡಿಯೋ ಇದು ಎಂದು ಹೇಳಲಾಗಿದೆ. ಜಬಲ್‌ಪುರದ ಕಟ್ನಿ ರೈಲ್ವೆ ಪೊಲೀಸ್ (ಜಿಆರ್‌ಪಿ) ನಿಲ್ದಾಣದ ಉಸ್ತುವಾರಿ ಅಧಿಕಾರಿ ಅರುಣಾ ವಗಾನೆ ಅವರು ವಯಸ್ಕ ಮಹಿಳೆ ಕುಸುಮ್ ವಂಸ್ಕರ್‌ಗೆ ಕೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಅಲ್ಲದೆ ಅವರ ಮೊಮ್ಮಗನ ಮೇಲೂ ಹಲ್ಲೆ ನಡೆಸಿರುವುದು ಸಿಸಿಟಿವಿಯವ್ವಿ ದಾಖಲಾಗಿದೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ವಿವಾದದ ಹಿನ್ನೆಲೆಯಲ್ಲಿ ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಕಾಂಗ್ರೇಸ್ ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದು, ಈ ಘಟನೆಯನ್ನು ‘ದಲಿತರ ಮೇಲಿನ ದಬ್ಬಾಳಿಕೆ’ಗೆ ಉದಾಹರಣೆ ಎಂದು ಉಲ್ಲೇಖಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ದಲಿತರ ದಬ್ಬಾಳಿಕೆಯು ಬಿಜೆಪಿಯ ದೊಡ್ಡ ಅಸ್ತ್ರವಾಗಿದೆ” ಎಂದು ಆರೋಪಿಸಿದರು ಮತ್ತು “ರಾಜಕೀಯ ದುರುದ್ದೇಶದ ಈ ಆಟ ನಿಲ್ಲಬೇಕು!”
ಇದನ್ನು “ಭೀಕರ ಘಟನೆ” ಎಂದು ಕರೆದ ಅವರು, “ಬಿಜೆಪಿಯ ದುರಾಡಳಿತದಲ್ಲಿ ಮಧ್ಯಪ್ರದೇಶದ ದಲಿತರು ಭೀಕರ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದಿದ್ದಾರೆ.

ಇನ್ನು ಪೊಲೀಸ್ ಅಧಿಕಾರಿ ಅರುಣಾ ವಾಗನೆ ಪ್ರಕಾರ, ಕುಸುಮ್ ವಂಸ್ಕರ್ ಅವರ ಮಗ ಮತ್ತು ದೀಪಕ್ ಅವರ ತಂದೆ ದೀಪಕ್ ವಂಸ್ಕರ್ ವಿರುದ್ಧ 19 ಪ್ರಕರಣಗಳಿವೆ ಮತ್ತು ರೈಲ್ವೆ ಪೊಲೀಸರಿಗೆ ಬೇಕಾಗಿದ್ದಾರೆ, ಅವನನ್ನು ಸೆರೆಹಿಡಿಯಲು 10,000 ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ. ಅವನ ಇಡೀ ಕುಟುಂಬವು ಕಳ್ಳತನದಲ್ಲಿ ತನಗೆ ಬೆಂಬಲ ನೀಡುತ್ತಿತ್ತು, ಆದ್ದರಿಂದ ಅವನ ಕುಟುಂಬ ಸದಸ್ಯರನ್ನು ವಿಚಾರಣೆಗಾಗಿ ಕರೆತರಲಾಗಿತ್ತು ಎಂದು ತಿಳಿಸಿದ್ದಾರೆ. ಈ ವಿಚಾರಣೆ ಬಳಿಕ ಆರೋಪಿ ದೀಪಕ್ ವಂಸ್ಕರ್ ಅವರನ್ನು ಬಂಧಿಸಲಾಯಿತು ಮತ್ತು ಪ್ರಸ್ತುತ ಜೈಲಿನಲ್ಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button