ಪ್ರಮುಖ ಸುದ್ದಿ

ಕ್ರೈಸ್ತಸಭಾ ನಾಯಕರ ಒಕ್ಕೂಟದಿಂದ ಅಭಿನಂದನಾ ಸಮಾರಂಭ

ಕ್ರೈಸ್ತ ಸಮುದಾಯಕ್ಕೆ ರುದ್ರಭೂಮಿ ಮಂಜೂರಿ

ಸರ್ಕಾರಿ ಸೌಲಭ್ಯ ಒದಗಿಸುವಲ್ಲಿ ಸಹಭಾಗಿತ್ವ ಅಗತ್ಯ-ದರ್ಶನಾಪುರ

ಯಾದಗಿರಿ,ಶಹಾಪುರಃ ಹಲವು ಸಮುದಾಯದ ಜನರಿಗೆ ಸ್ಮಶಾನ ಭೂಮಿ ದೊರೆಯದೆ ಪರದಾಡುವ ಸ್ಥಿತಿ ಇದೆ. ಅದರಂತೆ ಹಲವು ವರ್ಷಗಳಿಂದ ಕ್ರೈಸ್ತ ಸಮುದಾಯದ ಜನರಿಗೆ ರುದ್ರಭೂಮಿ ಹೊಂದಿರದ ಕಾರಣ ಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿರುವದನ್ನು ಕುರಿತು ಸಮುದಾಯದ ಜನ ನನ್ನ ಗಮನಕ್ಕೆ ತಂದರು, ತಕ್ಷಣ ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ರುದ್ರಭೂಮಿ ಒದಗಿಸುವ ಕಾರ್ಯ ಮಾಡಲಾಯಿತು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ನಗರದ ಕನ್ಯಾಕೋಳೂರ ರಸ್ತೆ ಮಾರ್ಗದಲ್ಲಿ ಕ್ರೈಸ್‍ಸಭಾ ನಾಯಕರ ಒಕ್ಕೂಟ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ರಾಂತ ಭೂಮಿ ಮಂಜೂರಿ ಕಾರ್ಯಕೈಗೊಂಡ ಪರಿಣಾಮ ಕ್ರೈಸ್ತ ಸಮುದಾಯ ನಾನು ಮರೆಯದಂತ ಗೌರವ ಸನ್ಮಾನ ನೀಡಿದರು. ನಾನು ಮಾಡಿರುವದು ಸಣ್ಣ ಕೆಲಸ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮದ ಮೂಲಕ ನನಗೆ ಇನ್ನಷ್ಟು ಕೆಲಸ ಮಾಡುವ ಭಾರವನ್ನು ಜವಬ್ದಾರಿಯನ್ನು ನೀಡಿದ್ದಾರೆ.

ಸಮುದಾಯದ ನಾಯಕರು ಸಲ್ಲಿಸಿದ ಬೇಡಿಕೆ ಕುರಿತು ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ವಿಶ್ರಾಂತ ಭೂಮಿ ಸುತ್ತಲೂ ಕಂಪೌಂಡ್ ನಿರ್ಮಾಣ ಸೇರಿದಂತೆ ಶಿರವಾಳ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಚರ್ಚ್‍ಗೆ ಕಂಪೌಂಡ್ ಕಟ್ಟಲು ಸಮರ್ಪಕ ವ್ಯವಸ್ಥೆ ಮಾಡಲಾಗುವದು.

ಇನ್ನೂ ವಸತಿಹೀನ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನೂ 3-4 ಸಾವಿರ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಇದೆ. ವಾಸಿಸಲು ಮನೆ ಸ್ಥಳವಿಲ್ಲದ ಬಾಡಿಗೆಯೂ ಕಟ್ಟದಾಗದ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಸರ್ಕಾರಿ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಸರ್ವರ ಸಹಭಾಗಿತ್ವ ಅಗತ್ಯವಿದೆ ಎಂದರು.

ಈ ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಜಿಲ್ಲಾ ಮೆಲ್ವಿಚಾರಕ ರೆವರೆಂಡ ಬಿ.ಧೂಳಪ್ಪ, ಕಲಬುರ್ಗಿಯ ಫಾದರ್ ವಿನ್ಸೆಂಟ್ ಪಿರೇರಾವಹಿಸಿ ಮಾತನಾಡಿದರು. ಮುಖ್ಯ ಅಥಿತಿಗಳಾಗಿ ಮುಖಂಡರಾದ ಚಂದ್ರಶೇಖರ ಆರಬೋಳ. ಸುರೇಂದ್ರ ಪಾಟೀಲ್ ಮಡ್ನಾಳ, ಬಸವರಾಜ ಹೀರೆಮಠ, ಸಣ್ಣ ನಿಂಗಣ್ಣ ನಾಯ್ಕೋಡಿ, ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ಮಲ್ಲಪ್ಪ ಗುತ್ತೇದಾರ, ಶಿವುಕುಮಾರ ಬಿಲ್ಲಂಕೊಂಡಿ ಉಪಸ್ಥಿತರಿದ್ದರು.

ಪ್ರಥಮದಲ್ಲಿ ಫಾದರ್ ವಿಜಯರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾದರ್ ಎಬಿನೆಜರ್ ಸ್ವಾಗತಿಸಿದರು. ಫಾದರ್ ಫೆಡ್ರಿಕ್ ಡಿಸೋಜಾ ನಿರೂಪಿಸಿದರು. ಪಾಸ್ಟರ್‍ಗಳಾದ ಸೀಮಿಯೊನ್ ಆರ್, ಸಾಮುವೇಲ್ ಇ. ಮಂಜು ನಾಯ್ಕ, ಬಸವರಾಜ, ಸೈಮನ್, ಗೇರ್ಷೋಮ್, ಗುರುಪುತ್ರ, ರಾಜೇಂದ್ರ ಪ್ರಸಾದ ಸೇರಿದಂತೆ ಮರಿರಾಜ ಮಾಸ್ಟರ್, ಸಾಲೋಮನ್ ಆಲ್ಫ್ರೆಡ್, ವಸಂತಕುಮಾರ ಸುರಪುರಕರ್, ಇಮಾನ್‍ವೇಲ್, ವೆಸ್ಲಿ ವೇದರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಸೇಬಿನ ಹಾರ ಹಾಕುವ ಮೂಲಕ ಶಾಸಕರನ್ನು ಸನ್ಮಾನಿಸಲಾಯಿತು. ಸಮುದಾಯ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button