ಅನಾಥಾಶ್ರಮದಲ್ಲಿ ಮಕ್ಕಳ ದಿನಾಚರಣೆ ಆಚರಿಸಿದ ಜೆಸ್ಕಾಂ ನೌಕರರು
ಜೆಸ್ಕಾಂ ಶಾಖೆಯಿಂದ 10 ಸಾವಿರ ಮೌಲ್ಯದ ಆಹಾರ ಧಾನ್ಯ ವಿತರಣೆ
ಶಹಾಪುರಃ ನಗರದ ಶ್ರೀಶೈಲ ಮಲ್ಲಿಕಾರ್ಜುನ ಶಿಶುಪಾಲನ ಕೇಂದ್ರ ಹಾಗೂ ವೃದ್ಧಾಶ್ರಮದಲ್ಲಿ ಇಲ್ಲಿನ ಜೆಸ್ಕಾಂ ಶಾಖೆಯ ಬಡಾವಣೆಯ ಗಣೇಶ ಕಮಿಟಿಯಿಂದ 10 ಸಾವಿರ ರೂ.ಮೌಲ್ಯದ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಆಶ್ರಮದ ಮಕ್ಕಳಿಂದ ಕೇಕ್ ಕತ್ತರಿಸಿ ಮಕ್ಕಳ ದಿನಾಚರಣೆ ಮಾಡುವ ಮೂಲಕ ಮಾದರಿ ಎನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಸ್ಕಾಂ ನೌಕರರ ಸಂಘದ ಕಾರ್ಯಧ್ಯಕ್ಷ ಎಕ್ಬಾಲ್ ಲೋಹಾರಿ, ಮಕ್ಕಳ ದಿನಾಚರಣೆ ಅಂಗವಾಗಿ ಅನಾಥಾಶ್ರಮದಲ್ಲಿರುವ ಮಕ್ಕಳ ನಿತ್ಯ ಭೋಜನ, ಉಪಹಾರಕ್ಕಾಗಿ ಜೆಸ್ಕಾಂ ಗಣೇಶ ಕಮಿಟಿಯಿಂದ 10 ಸಾವಿರ ರೂ.ಮೌಲ್ಯದ ಆಹಾರ ಧಾನ್ಯ ನೀಡಿದ್ದು, ಅಲ್ಲದೆ ಮಕ್ಕಳಿಂದ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಮಕ್ಕಳೊಂದಿಗೆ ಸಂಭ್ರಮದಿಂದ ಕ್ಷಣಕಾಲ ಕಳೆದವು.
ತಂದೆ ತಾಯಿಯಲ್ಲ ಮಕ್ಕಳೊಂಧಿಗೆ ಒಂದಿಷ್ಟು ಸಮಯ ಕಳೆಯುವದರ ಜೊತೆಗೆ ಕಳಯಾದ ಸಹಾಯ ಸಹಕಾರ ನೀಡುವದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಎಲ್ಲರ ಅಭಿಪ್ರಾಯದಂತೆ ಕಮಿಟಿಯಿಂದ ಹಣ ನೀಡುವದಕ್ಕಿಂತ ಆಹಾರ ಧಾನ್ಯ ನೀಡುವದು ಒಳಿತು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಅನಾಥಾಶ್ರಮದಕ್ಕೆ ಜೋಳ, ಗೋದಿ, ಒಳ್ಳೆಣ್ಣಿ, ದಿನಸಿ ಸಾಮಾಗ್ರಿಗಳನ್ನು ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜೆಸ್ಕಾಂ ಶಾಖಾಧಿಕಾರಿ ಬಾಪುಗೌಡ, ಗಣೇಶ ಕಮಿಟಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಕೆ.ಪಾಟೀಲ್, ಖಜಾಂಚಿ ಬಂದಯ್ಯ ಸ್ವಾಮಿ, ಮುರ್ತುಜಾ ಪಟೇಲ್, ಹಜರಬಿ ಸೇರಿದಂತೆ ಜೆಸ್ಕಾಂ ಶಾಖೆಯ ಸಿಬ್ಬಂದಿ ವರ್ಗ ಇತರರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕೇಕ್, ಸಿಹಿ ಹಂಚಿಕೆ ಮಾಡಲಾಯಿತು.