ಶಹಾಪುರಃ ವಿದ್ಯುತ್ ಅವಘಡ ಕಿರಾಣಿ ಅಂಗಡಿಗೆ ಬೆಂಕಿ
ಕಿರಾಣಿ ಅಂಗಡಿಗೆ ಬೆಂಕಿ ಅಪಾರ ಮೌಲ್ಯದ ಸಾಮಾಗ್ರಿ ಭಸ್ಮ
ಶಹಾಪುರಃ ನಗರದ ಮಾರುತಿ ರಸ್ತೆ ಮಾರ್ಗದಲ್ಲಿ ಇರುವ ತುಂಬಗಿ ಅವರ ಶ್ರೀ ಮಹಾಂತೇಶ್ವರ ಕಿರಾಣಿ ಮರ್ಚಂಟ್ ಗೆ ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿ ಉರಿದ ಪರಿಣಾಮ ಅಪಾರ ಮೌಲ್ಯದ ಸಾಮಾಗ್ರಿಗಳು ಅಂಗಡಿ ಮೇಲ್ಛಾವಣೆ ಸುಟ್ಟು ಭಸ್ಮವಾದ ಘಟನೆ ಶುಕ್ರವಾರ ನಡೆದಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಂದಾಜು 10 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಅಂಗಡಿಯ ಮೇಲ್ಛಾವಣೆ ಸುಟ್ಟಿದ್ದು, ಆಹಾರ ಸಾಮಾಗ್ರಿ ಸೇರಿದಂತೆ ಜನರೇಟರ್ ಯಂತ್ರ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ.
ವಿದ್ಯುತ್ ಅವಘಡದಿಂದಲೇ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೆಳಗಿನ ಜಾವ ಬಿಸಿದ ಬಿರುಗಾಳಿಗೆ ವಿದ್ಯುತ್ ತಂತಿ ತಗುಲಿ ಸಮಸ್ಯೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂಗಡಿ ಮೇಲ್ಛಾವಣೆ ಕಟ್ಟಿಗೆ ತುಂಡುಗಳಿರುವ ಕಾರಣ ಮತ್ತು ಸಾಮಾಗ್ರಿ ಇಡಲು ಮಾಡಿಸಿದ ರ್ಯಾಕ್ಸ್ ಸೇರಿದಂತೆ ಎಲ್ಲವೂ ಸುಟ್ಟಿವೆ.
ಬೆಂಕಿ ಬಿದ್ದ ಪರಿಣಾಮ ಸ್ಟೋರ್ ಮಾಡಿದ ಆಹಾರ ಸಾಮಾಗ್ರಿ ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.