ಯಾದಗಿರಿಃ ಕೋವಿಡ್ ಆರ್‍ಟಿಪಿಸಿಆರ್ ಲ್ಯಾಬ್ ಉದ್ಘಾಟನೆ
ಯಾದಗಿರಿಃ ಕೋವಿಡ್ ಆರ್‍ಟಿಪಿಸಿಆರ್ ಲ್ಯಾಬ್ ಉದ್ಘಾಟನೆ
ಯಾದಗಿರಿಃ ಸರ್ಕಾರದ ಮಾರ್ಗಸೂಚನೆ ಅನ್ವಯ ಮುಂಜಾಗೃತ ಕ್ರಮಗಳೊಂದಿಗೆ ಮಾದರಿ ಪರೀಕ್ಷೆ
ನಡೆಸಬೇಕೆಂದು ಜಿಲ್ಲಾ ಉಸ್ತುವಾರ ಸಚಿವ ಪ್ರಭು ಚವ್ಹಾಣ ಸೂಚಿಸಿದರು.
ನಗರದ ಹೊರವಲಯದ ಕೋವಿಡ್-19 ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಆರ್‍ಟಿಪಿಸಿಆರ್ ಲ್ಯಾಬ್ ಶುಕ್ರವಾರ
ಉದ್ಘಾಟಿಸಿ ಅವರು ಮಾತನಾಡಿದರು.
ಲ್ಯಾಬ್‍ನಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞರು ಮತ್ತು ಸಿಬ್ಬಂದಿಗಳು ವಯಕ್ತಿಕ ಸುರಕ್ಷತೆಗಾಗಿ ಹೆಚ್ಚಿನ ಆದ್ಯತೆ ನೀಡುವಂತೆಯ ಸೂಚಿಸಿದರು.
ನಗರದಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪಿತಗೊಂಡಿರುವದರಿಂದ ಬೆಂಗಳೂರ ಮತ್ತು ಕಲಬುರ್ಗಿಗೆ ತೆರಳುವ ಅಗತ್ಯವಿಲ್ಲ. ಕೊರೊನಾ ಸೋಂಕು ಪತ್ತೆಗಾಗಿ ಈಗ ಬೇರಡೆ ತೆರಳುವ ಅಗತ್ಯವಿಲ್ಲ. ಇಲ್ಲಿಯೇ ಲ್ಯಾಬ್ ತೆರೆಯಲಾಗಿದ್ದು, ಸಮರ್ಪಕವಾಗಿ ಕೊರೊನಾ ಟೆಸ್ಟಿಂಗ್ ಮಾಡಿಸಬಹುದು ಅಲ್ಲದೆ ಕೂಡಲೇ ಅದರ ವರದಿ ಪಡೆಯಲು ಅನುಕೂಲವಾಗಲಿದೆ. ಇದರಿಂದ ಕೊರೊನಾ ತಡೆಗೆ ಅನುಕೂಲವಾಗಲಿದೆ ಎಂದರು.
ಮುಂಚಿತವಾಗಿ ಲ್ಯಾಬ್ ಪ್ರದೇಶದ ಕಟ್ಟಡವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲ ಶಾಸಕ ವೆಂಕಟರಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಪಂ ಸಿಇಓ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಇದ್ದರು.