ಪ್ರಮುಖ ಸುದ್ದಿ
ಶಾಸಕರ ವ್ಯಾಪಾರ ಮಾಡಿದ ಬಿಜೆಪಿಗೆ ಆತುರ -ಸಿದ್ಧರಾಮಯ್ಯ
ಬೆಂಗಳೂರು: ಬಿಜೆಪಿಯವರು ಶಾಸಕರ ವ್ಯಾಪಾರ ಮಾಡಿ ಕಳಿಸಿದ್ದು ಆತುರದಲ್ಲಿದ್ದಾರೆ. ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ ಆಗಿದ್ದು ಚರ್ಚೆ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ವಿಶ್ವಾಸ ಮತ ಪ್ರಸ್ತಾವನೆ ಮೇಲೆ ಚರ್ಚೆ ನಡೆಯುತ್ತಿದ್ದು ಇಪ್ಪತ್ತು ಶಾಸಕರು ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಸೋಮವಾರಕ್ಕೂ ಚರ್ಚೆ ಮುಂದುವರೆಯಬಹುದು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.