ಪ್ರಮುಖ ಸುದ್ದಿ
ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ
75 ಸಾವಿರ ರೂಪಾಯಿ ನಗದು ಜಪ್ತಿ
ಯಾದಗಿರಿ: ಜೂಜು ಅಡ್ಡೆ ಮೇಲೆ ದಿಡೀರನೆ ದಾಳಿ ನಡೆಸಿದ ಪೊಲೀಸರು 75 ಸಾವಿರ ನಗದು ವಶಪಡಿಸಿಕೊಂಡ ಘಟನೆ ಸುರಪುರ ತಾಲೂಕಿನ ರುಕ್ಮಾಪೂರ ಗ್ರಾಮದಲ್ಲಿ ನಡೆದಿದೆ.
ಸುರಪುರ ಡಿಎಸ್ಪಿ ಶೀಲವಂತಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪೊಲೀಸರು ಆಗಮಿಸುತಗತಿದ್ದಂತೆ ಇಸ್ಪೇಟ್ ಆಡುತಗತಿದ್ದ 20 ಕ್ಕೂ ಹೆಚ್ವು ಜೂಜುಕೋರರು ಸ್ಥಳದಿಂದ ಕಾಲಿಗೆ ಬುದ್ಧಿ ಹೇಳಿದ್ದಾರೆ.
ಅಡ್ಡೆಯಲ್ಲಿ ಬಿಟ್ಟಿದ್ದ 75 ಸಾವಿರ ರೂ. ಹಣ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.