ವಿನಯ ವಿಶೇಷ

ನಿಮ್ಮ ಈ ದಿನದ ಭವಿಷ್ಯ ಹೇಗಿದೆ ನೋಡಿ

ಶ್ರೀ ಗುರು ರಾಯರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಚಿತ್ತ
ಋತು : ಗ್ರೀಷ್ಮ
ರಾಹುಕಾಲ 12:56 – 15:32
ಗುಳಿಕ ಕಾಲ 09:07 – 10:43
ಸೂರ್ಯೋದಯ 05:54:24
ಸೂರ್ಯಾಸ್ತ 18:44:55
ತಿಥಿ : ಏಕದಶಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಜಾಹಿರಾತು

ಮೇಷ ರಾಶಿ
ಮಕ್ಕಳ ಉದ್ಯೋಗದಲ್ಲಿ ಮಹತ್ವದ ನಿರೀಕ್ಷೆ ಹಾಗೂ ಬದಲಾವಣೆ ಆಗಲಿದೆ. ಪತ್ನಿಯ ಸಾಂಗತ್ಯದಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ನಿರೀಕ್ಷಿತ ಧನಾಗಮನ ಆಗಲಿದೆ. ನೀವು ಸಾಧನಾ ಜೀವಿ ನಿಮ್ಮ ಗುರಿ ಮುಟ್ಟಲು ಹಲವು ಮಹತ್ವದ ತಿರುವುಗಳು ಸಿಗಲಿದೆ. ಕೆಲಸದಷ್ಟೇ ಮನೆಯ ವಿಚಾರಗಳಿಗೂ ಪ್ರಾಮುಖ್ಯತೆ ಇಂದು ನೀಡುವಿರಿ. ಕೆಲಸದಲ್ಲಿ ಉತ್ತಮ ನಿರ್ವಹಣೆ ಇದ್ದು ನಿಮಗೆ ಅಧಿಕ ಒತ್ತಡವನ್ನು ಸಹ ತರಲಿದೆ, ವಿಶ್ರಾಂತಿ ಪಡೆಯುವುದು ಒಳ್ಳೆಯದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ವೃಷಭ ರಾಶಿ
ಉದ್ಯೋಗದಲ್ಲಿ ಇನ್ನೂ ಹೆಚ್ಚಿನ ಶ್ರಮ ಅವಶ್ಯಕತೆಯಿದೆ. ಕುಟುಂಬ ನಿರ್ವಹಣೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ರೀತಿ ಪಡಿಸಿಕೊಳ್ಳುವುದು ಒಳ್ಳೆಯದು. ಕೆಲಸದಲ್ಲಿ ಕೆಲವು ವಿಷಯಗಳನ್ನು ನಿಮ್ಮ ವಿರುದ್ಧ ಪ್ರಸ್ತಾಪಿಸಿ ಮೇಲಾಧಿಕಾರಿಗಳವರೆಗೆ ಗಮನಕ್ಕೆ ತರಬಹುದು ಇದರಿಂದ ನಿಮ್ಮಲ್ಲಿ ಹಿನ್ನಡೆ ಆಗಲಿದೆ. ಎಲ್ಲವೂ ಶಾಂತಿಯಿಂದ ಇದ್ದಾಗ ಕೆಲವೊಂದು ವಿಷಯಗಳನ್ನು ಕೆದಕಿ ಸಮಸ್ಯೆ ಸೃಷ್ಟಿಸಿಕೊಳ್ಳಬೇಡಿ. ನಿಮ್ಮ ವ್ಯವಸ್ಥಿತ ಕಾರ್ಯಗಳಿಗೆ ಒಪ್ಪಿಗೆ ಸಿಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕೆಲಸಗಳಲ್ಲಿ ಪಲಿತಾಂಶ ಸಿಗದಿದ್ದಾಗ ವಿಧಿಯನ್ನು ದೂರಬೇಡಿ ಸನ್ಮಾರ್ಗದಲ್ಲಿ ಕೆಲಸ ಸಿದ್ಧಿ ಮಾಡಿಕೊಳ್ಳಲು ಪ್ರಯತ್ನಿಸಿ, ಇಷ್ಟದೇವತಾರದನೆ ಮಾಡುವುದು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಇಬ್ಬರ ಜಗಳದಲ್ಲಿ ನೀವು ಮಧ್ಯಪ್ರವೇಶಿಸಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವ ಪರಿಸ್ಥಿತಿ ಬರಬಹುದು ಎಚ್ಚರವಿರಲಿ. ವಿರೋಧಿ ವರ್ಗಗಳಿಂದ ಉಪಟಳ ಹೆಚ್ಚಾಗುವ ಸಾಧ್ಯತೆ. ಸಣ್ಣ ಪ್ರಯತ್ನದಿಂದ ಪ್ರಾರಂಭಿಸಿರುವ ಕಾರ್ಯಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಸಹಕಾರಿಯಾಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಮನೆಗೆ ಬಂಧುಮಿತ್ರರ ಭೇಟಿಯಿಂದ ಸಂತೋಷ ಹೆಚ್ಚಾಗಲಿದೆ. ಇಂದು ಮೋಜು-ಮಸ್ತಿ ಗಳಲ್ಲಿ ಹೆಚ್ಚಾಗಿ ಕಾಲಹರಣ ಮಾಡಬೇಡಿ. ಕೆಲಸದಲ್ಲಿ ಇತ್ತೀಚಿಗೆ ನಿಮ್ಮ ಶ್ರದ್ಧೆ ಕಡಿಮೆಯಾಗುತ್ತಿರುವುದು ಅದರ ಬಗ್ಗೆ ಗಮನ ನೀಡಿ. ಸುಖಾಸುಮ್ಮನೆ ಹಣವನ್ನು ನೀರಿನಂತೆ ವ್ಯಯಿಸುವುದು ತಪ್ಪಾಗುತ್ತದೆ. ಪ್ರೀತಿಯಿಂದ ಮತ್ತು ಮಮಕಾರದಿಂದ ಪತ್ನಿಯ ಮನಸ್ಸನ್ನು ಗೆಲ್ಲಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಸಿಂಹ ರಾಶಿ
ಇಂದು ಜನಗಳ ಪ್ರೇಮವನ್ನು ನೀವು ಸಂಪಾದಿಸುತ್ತೀರಿ, ಇದರಿಂದ ನಿಮ್ಮ ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯುವ ಹುಮ್ಮಸ್ಸು ಹೆಚ್ಚಲಿದೆ. ಯೋಜನೆಗಳಲ್ಲಿ ನಿಮ್ಮ ನಿರ್ಧಾರಗಳನ್ನು ಕೆಲವರು ಪ್ರಶ್ನಿಸಬಹುದು, ಕೆಲವರು ಆತಂಕ ಪಡಬಹುದು, ಕೆಲವರು ಹೊಟ್ಟೆಕಿಚ್ಚು ಪಡಬಹುದು, ಆದರೆ ನಿಮ್ಮ ದಾರಿ ವ್ಯವಸ್ಥಿತವಾಗಿದೆ ಚಿಂತೆ ಬೇಡ. ಇಂದು ಉನ್ನತ ವ್ಯಕ್ತಿಗಳ ಸಂಪರ್ಕ ಸಾಧಿಸುವ ಪ್ರಯತ್ನ ಮಾಡುವಿರಿ. ಉದ್ಯೋಗದಲ್ಲಿ ಲವಲವಿಕೆ ಹಾಗೂ ದಕ್ಷತೆ ಹೆಚ್ಚಲಿದೆ. ಕುಟುಂಬದಲ್ಲಿ ನಡೆಯುವ ಆಂತರಿಕ ವಿಷಯಗಳನ್ನು ಪ್ರಸ್ತಾಪಿಸಬೇಡಿ ಹಾಗೆಯೇ ಮನದಲ್ಲಿ ಇಟ್ಟು ಚಿಂತೆ ಮಾಡುತ್ತಾ ಕುಳಿತುಕೊಳ್ಳಬೇಡಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಕೆಲವು ಕಾರ್ಯಗಳನ್ನು ದಿಡೀರ್ ಎಂದು ಮಾಡಿ ಮುಗಿಸುವುದು ಸುಲಭವಲ್ಲ ಅದಕ್ಕೆ ವ್ಯವಸ್ಥಿತ ಯೋಜನೆ ರೂಪರೇಷೆ ಅವಶ್ಯಕವಿದೆ, ಎಂಬುದನ್ನು ಮನಗಾಣಿರಿ. ಹಣಕಾಸಿನಲ್ಲಿ ಲಾಭಂಶ ಹೆಚ್ಚಾಗಲಿದೆ. ಉಳಿತಾಯದ ಯೋಜನೆಗಳು ನಿಮಗೆ ಆಕರ್ಷಿಸುತ್ತದೆ. ಕುಟುಂಬ ಸಮೇತ ಮನರಂಜನೆ ಕಾರ್ಯಕ್ರಮಗಳಿಗೆ ತಯಾರಿ ನಡೆಸುವಿರಿ. ಹೊಸತನದ ಆಲೋಚನೆ ನಿಮ್ಮ ಕೆಲಸದಲ್ಲಿ ಇಂದು ಕಾಣಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ತುಲಾ ರಾಶಿ
ಅನಪೇಕ್ಷಿತವಾಗಿ ಮಾತನಾಡಿ ವರ್ಚಸ್ಸು ಹಾಳುಮಾಡಿಕೊಳ್ಳಬೇಡಿ. ಮನೆಯ ಅಲಂಕಾರಕ್ಕೆ ಒತ್ತು ನೀಡುವ ಸಾಧ್ಯತೆ. ಸಮಯ ಪರಿಪಾಲನೆ ಇಲ್ಲದೆ ಕಾರ್ಯಗಳಲ್ಲಿ ವಿಳಂಬ ಹೆಚ್ಚಾಗಬಹುದು. ಕೆಲವು ದುಷ್ಟರು ನಿಮ್ಮನ್ನು ದಾರಿ ತಪ್ಪಿಸಬಹುದು ಎಚ್ಚರವಿರಲಿ. ಮಾತುಗಳನ್ನು ಇತಿಮಿತಿಯಲ್ಲಿ ಆಡುವುದು ಒಳ್ಳೆಯದು ಇಲ್ಲದಿದ್ದಲ್ಲಿ ಸ್ನೇಹದಲ್ಲಿ ಜಗಳದ ಪ್ರಸಂಗ ಬರಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಮಕ್ಕಳಲ್ಲಿ ಸ್ಪಷ್ಟ ದಾರಿ ಹಾಗೂ ಭವಿಷ್ಯದ ಮುನ್ನಡೆ ನೀವು ಕಾಣಲಿದ್ದೀರಿ. ಕೆಲಸದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತರಾಗಿ ಕೂರಬೇಡಿ, ನೀವೇ ಪಾಲ್ಗೊಂಡು ಯಶಸ್ವಿಗೆ ಶ್ರಮವಹಿಸಿ. ಹಣಕಾಸಿನಲ್ಲಿ ನಿಮ್ಮ ತಂತ್ರಗಾರಿಕೆ, ಸಂಪರ್ಕ ಹಾಗೂ ವಿಸ್ತರಣೆ ಹೆಚ್ಚು ಮಾಡುತ್ತದೆ, ಆದಾಯವು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದ ಶ್ರದ್ಧೆ, ತಾಳ್ಮೆ ಉತ್ತಮ ವಾತಾವರಣ ಸೃಷ್ಟಿಸಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಮನಸ್ಸಿಗೆ ಹಚ್ಚಿಕೊಂಡಿರುವ ವಿಷಯವನ್ನು ನಂಬಿಕಸ್ಥರು ಬಳಿ ಮುಕ್ತವಾಗಿ ಹಂಚಿಕೊಂಡು ಪರಿಹಾರ ಮಾಡಿಕೊಳ್ಳಿ. ಕನಸು ಕಾಣುವುದು ಒಳ್ಳೆಯದು ಆದರೆ ಅದೇ ಜೀವನವಲ್ಲ ಎಂಬುದನ್ನು ನೆನಪಿಡಿ. ಮನೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳಿ. ನೀವು ಮಾಡಿದ ತಪ್ಪುಗಳನ್ನು ಮನಗಂಡು ಅಲ್ಲಿಯೇ ಇತ್ಯರ್ಥ ಮಾಡಿಬಿಡಿ, ವೃತ ನಿಮ್ಮದೇ ಸರಿ ಎಂಬ ವಾದವಿವಾದ ಬೇಡ. ಮಕ್ಕಳ ಮೇಲೆ ನೀವು ಸೂಕ್ತ ನಿಗಾವಹಿಸುವುದು ಒಳಿತು. ಅನುಪಯುಕ್ತ ವಸ್ತುಗಳ ಖರೀದಿಯಿಂದ ಹಣಕಾಸಿನಲ್ಲಿ ದುಂದುವೆಚ್ಚ ಹೆಚ್ಚಾಗಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಹಣಕಾಸಿನಲ್ಲಿ ನಿಮಗೆ ಹೆಚ್ಚಿನ ಅವಕಾಶ ಸಿಗಲಿದೆ ಆದರೆ ಅದನ್ನು ಪಡೆಯುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಇಂದು ಅನೇಕ ಯೋಜನೆಗಳಿಗೆ ನಿಮ್ಮ ಸಾರಥ್ಯ ಬಯಸಿ ಹಲವರು ಬರುವ ಸಾಧ್ಯತೆಯಿದೆ. ಹಳೆಯ ದ್ವೇಷ ವೈರಾಗ್ಯವನ್ನು ಬದಿಗಿಟ್ಟು ಮುಂದಿನ ಭವಿಷ್ಯಕ್ಕೆ ಸಿದ್ಧರಾಗಿ. ನಿಮ್ಮ ವಿನಯಶೀಲತೆ ಗುಣಗಳಿಂದ ಪ್ರಶಂಸೆ ಹಾಗೂ ಲಾಭಕ್ಕೆ ಪಾತ್ರರಾಗುತ್ತೀರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕುಂಭ ರಾಶಿ
ಆರ್ಥಿಕ ವ್ಯವಹಾರ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ, ಆದರೂ ನೀವು ಮಾಡುತ್ತಿರುವ ಕಾರ್ಯ ಮುಂದಿನ ದಿನಗಳಲ್ಲಿ ಸುವರ್ಣ ಫಲಿತಾಂಶ ಸಿಗುತ್ತದೆ. ಕುಟುಂಬಸ್ಥರ ಮಾತನ್ನು ಸಮಾಧಾನದಿಂದ ಕೇಳುವಂಥರಾಗಿ. ಕೆಲಸದಲ್ಲಿ ಮನಸ್ಥಿತಿ ಉತ್ತಮವಾಗಿ ಬೆಳೆಸಿಕೊಳ್ಳಿ. ಧೈರ್ಯದಿಂದ ಮುನ್ನಡೆಯಿರಿ, ಮಾತಿನ ಮೋಡಿಯ ಮೂಲಕ ವ್ಯವಹಾರ ಕುದುರಿಸಿಕೊಳ್ಳಿ. ಬಂಧುಗಳಿಂದ ವಿನಾಕಾರಣ ಸಮಸ್ಯೆ ಸೃಷ್ಟಿಯಾಗುವುದು ಎಚ್ಚರವಿರಲಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ಅನಿರೀಕ್ಷಿತವಾಗಿ ಧನಾಗಮನ ಆಗಲಿದೆ. ಕೆಲಸದಲ್ಲಿ ನಿಮ್ಮ ನಿರ್ವಹಣೆ ಕಂಡು ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಲಿದ್ದಾರೆ. ವಿರೋಧಿ ವರ್ಗದವರು ಇಂದು ನಿಮ್ಮ ಬೆಳವಣಿಗೆ ಕಂಡು ಅಸೂಯೆ ಪಡುವ ಸಾಧ್ಯತೆ ಇದೆ. ನಿಮ್ಮ ವರ್ತನೆಯಲ್ಲಿ ಕೆಲವು ಅಂಶಗಳು ಅತಿ ಎನಿಸುವಂತೆ ಇರಲಿದೆ, ಆದಷ್ಟು ಅವುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಿ.
ಶುಭ ಸಂಖ್ಯೆ 5
ಗಿರಿದರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ದಾಂಪತ್ಯ, ಮದುವೆ, ಸಂತಾನ, ಪ್ರೇಮ ವಿಚಾರ, ಹಣಕಾಸು, ಸಾಲಬಾದೆ ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262

Related Articles

Leave a Reply

Your email address will not be published. Required fields are marked *

Back to top button