ಪ್ರಮುಖ ಸುದ್ದಿ
ಬಡವರ ಕಲ್ಯಾಣ ಮುಜರಾಯಿ ಇಲಾಖೆ ಗಿಫ್ಟ್..!ಏನ್ ಗೊತ್ತಾ.?
ಬೆಂಗಳೂರಃ ರಾಜ್ಯದ ಬಡ ಜನರಿಗೆ ಮುಜರಾಯಿ ಇಲಾಖೆ ಗಿಫ್ಟ್ ನೀಡಲು ಮುಂದಾಗಿದೆ. ಅದು ರಾಜ್ಯ ಸುಮಾರು 100 ದೇವಾಲಯಗಳಲ್ಲಿ ಸರ್ಕಾರದವತಿಯಿಂದಲೇ ಉಚಿತ ಸಾಮೂಹಿಕ ವಿವಾಹ ನಡೆಸಲು ಮುಂದಾಗಿದೆ.
ಅದು ಇದೇ ವರ್ಷದಿಂದ ಆರಂಭಿಸಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಮುಜರಾಯಿ ಖಾತೆಗೆ ಒಳಪಡುವ ರಾಜ್ಯ ಪ್ರಮುಖ 100 ದೇವಾಲಯಗಳಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುವ ಯೋಜನೆಗೆ ಬಡವರ ಕಲ್ಯಾಣ ಎಂದು ಹೆಸರಿಸಲಾಗಿದೆ.
ಪ್ರತಿ ಜೋಡಿಗೆ 25 ರಿಂದ 30 ಸಾವಿರ ರೂ.ಖರ್ಚು ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ ತಾಳಿಯನ್ನು ಸರ್ಕಾರವೇ ನೀಡಲಿದೆ. ಹಿಂದೂ ಸಂಪ್ರದಾಯ ಪ್ರಕಾರ ಮದುವೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಪ್ರತಿ ವರ್ಷ ಅಂದಾಜು 10 ಸಾವಿರ ಜೋಡಿಗಳ ವಿವಾಹ ಕೈಗೊಳ್ಳಬೇಕು ಎಂದು ನಿರ್ಣಯಿಸಲಾಗಿದೆ.
ಸರ್ಕಾರದ ಈ ಬಡವರ ಕಲ್ಯಾಣ ಯೋಜನೆ ಸಮರ್ಪಕವಾಗಿ ಜಾರಿಯಾಗುವ ಮೂಲಕ ಬಡವರ ದೀನ ದಲಿತರ ದಾರಿದ್ರ್ಯ ದೂರವಾಗಿ ಸರಳ ಯೋಜನೆಯಡಿ ಮದುವೆಯಾಗಿ ಬದುಕು ಕಟ್ಟಿಕೊಳ್ಳಲ ಅನುಕೂಲವಾದರೆ ಸಾಕು ಎನ್ನುತ್ತಿದೆ ಪ್ರಜ್ಞಾವಂತರ ಗುಂಪು.