ಪ್ರಮುಖ ಸುದ್ದಿ
ಪ್ರಿಯಾಂಖ ಖರ್ಗೆಗೆ ಉಮೇಶ ಜಾಧವ ಸವಾಲ್
ಚಿಂಚೋಳಿ ಕ್ಷೇತ್ರಕ್ಕೆ ಪ್ರಿಯಾಂಖ ನಿಲ್ಲಲಿ ಜಾಧವ ಸವಾಲ್
ಕಲಬುರಗಿಃ ಸಮಾಜ ಕಲ್ಯಾಣ ಸಚಿವ ಪ್ರಿಯಾಂಖ ಖರ್ಗೆ ಚಿಂಚೋಳಿ ವಿಧಾನಸಭಾ ಕ್ಷೇತ್ರ ದತ್ತು ಪಡೆಯುವದಾಗಿ ಹೇಳಿದ್ದರು ಹೀಗಾಗಿ ಬೈ ಎಲೆಕ್ಷನ್ ನಲ್ಲಿ ಪ್ರಿಯಾಂಖ ಖರ್ಗೆ ನನ್ನ ಮಗನ ಎದುರು ಸ್ಪರ್ಧಿಸಲಿ ಎಂದು ಉಮೇಶ ಜಾಧವ ಸವಾಲ್ ಹಾಕಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಬಿಜೆಪಿಯಿಂದ ನನ್ನ ಮಗ ಅವಿನಾಶ ಜಾಧವ ಸ್ಪರ್ಧಿಸಲಿದ್ದು, ಪ್ರಿಯಾಂಖ ಖರ್ಗೆನು ಸ್ಪರ್ಧಿಸಲಿ ಎಂದು ಖಡಕ್ ಆಗಿ ಹೇಳಿದರು.
ಕಾಂಗ್ರೆಸ್ ನಿಂದ ಈಗಾಗಲೇ ಸುಭಾಷ ರಾಠೋಡ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಬಿಜೆಪಿ ಕಡೆಯಿಂದ ಉಮೇಶ ಜಾಧವ ಅವರ ಪುತ್ರ ಅವಿನಾಶ ಜಾಧವ ಹೆಸರು ಫೈನಲ್ ಆಗಿದೆ.
ಬೈ ಎಲೆಕ್ಷನ್ ಚಿಂಚೋಳಿ ಅಖಾಡ ರಂಗೇರುತ್ತಿದ್ದು, ಮತ್ತೊಮ್ಮೆ ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ ಜಾಧವ ನಡುವೆ ಜಿದ್ದಾಜಿದ್ಸಿ ನಡೆಯಲಿದೆ ಎನ್ನಬಹುದು.
ಖರ್ಗೆ ಆಪ್ತ ಎನಿಸಿದ ಸುಭಾಷ ರಾಠೋಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದು, ಮತ್ತೊಮ್ಮೆ ಚಿಂಚೋಳಿ ಕ್ಷೇತ್ರ ರಂಗೇರಲಿದೆ.