ಶಹಾಪುರದಲ್ಲಿ ಮೈಸೂರ ರಾಜ ಯದುವೀರ-ಭೇಟಿಯಾಗಿ ಸಂತಸಪಟ್ಟ ಯುವಕರು
ವೈಷ್ಣವಿ ಹೊಟೇಲ್‍ನಲ್ಲಿ ಮಹಾರಾಜ ಯದುವೀರ- ಕೈಕುಲುಕಿದ ಯುವಕರು
ಯಾದಗಿರಿ, ಶಹಾಪುರಃ ಸಮೀಪದ ಕಲಬುರ್ಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಶ್ರೀ ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ಬುಧವಾರ ನಡೆದ ಚಿನ್ನದ ಕಂತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಭಾಜನರಿಗೆ ಪ್ರಧಾನ ಮಾಡಲು ಆಗಮಿಸಿದ್ದ ಮೈಸೂರ ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ನಗರದ ವೈಷ್ಣವಿ ಹೊಟೇಲ್ ನಲ್ಲಿ ಮಧ್ಯಾಹ್ನ ಭೋಜನ ಸವಿದರು.
ಈ ವೇಳೆ ನಗರದ ಯುವಕರು ಮೈಸೂರ ಮಹಾರಾಜ ಯದುವೀರ ಒಡೆಯರೆಂಬುದನ್ನು ಗುರುತಿಸಿ ಅವರನ್ನು ಭೇಟಿಯಾಗಿ ಗೌರವಿಸಿದರು. ತಂಡೋಪತಂಡವಾಗಿ ನಗರದ ಜನತೆ ಮಹಾರಾಜರ ಕೈ ಕುಲಕಿ ಸಂತಸಪಟ್ಟರು. ಅಲ್ಲದೆ ಅವರ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು. ಮಹಾರಾಜ ಯದುವೀರ ಎಂಬುದನ್ನು ಗುರುತಿಸಿ ಪ್ರೀತಿಯಿಂದ ಮಾತಾಡಿಸಿದ ಇಲ್ಲಿನ ಜನರ ಅಭಿಮಾನಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹೈಕ ಭಾಗಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿದ್ದು, ಸಮೀಪದ ಕಲಬುರ್ಗಿ ಹತ್ತಿರ ಶ್ರೀನಿವಾಸ ಸರಡಗಿ ಗ್ರಾಮದ ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದೇನೆ. ಹೀಗಾಗಿ ಇತ್ತ ಬರಬೇಕಾಯಿತು ಎಂದು ಇಲ್ಲಿನ ಜನರೊಡನೆ ಅಭಿಪ್ರಾಯ ಹಂಚಿಕೊಂಡರು.