ಪ್ರಮುಖ ಸುದ್ದಿ
ಸರ್ಕಾರಿ ಕಾರ್ಯಕ್ರಮಗಳಿಗೂ ಮಾಧ್ಯಮಕ್ಕೆ ಬ್ರೇಕ್..?
ಬೆಂಗಳೂರಃ ಇಂದು ವಿಧಾನಸೌಧದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ಮಾಧ್ಯಮದವರನ್ನು ಸುದ್ದಿ ಮಾಡಲು ಒಳಗಡೆ ಬಿಡದ ಪೊಲೀಸ್ ಅಧಿಕಾರಿಗಳು ಮಾಧ್ಯಮದ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಪತ್ರಕರ್ತರು ಆರೋಪಿಸಿದ್ದಾರೆ.
ಇಷ್ಟು ದಿನ ಅಧಿವೇಶನಕ್ಕೆ ಮತ್ತು ಸಿಎಂ ಮನೆಗೆ ಮಾಧ್ಯಮಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಇದೀಗ ಸರ್ಕಾರಿ ಕಾರ್ಯಕ್ರಮಗಳಿಗೂ ಕಡಿವಾಣ ಹಾಕುತ್ತಿದೆಯೇ ಎಂದು ಮಾಧ್ಯಮಮಿತ್ರರು ಪ್ರಶ್ನಿಸಿದ್ದಾರೆ. ಸರ್ಕಾರದ ನಡೆಯನ್ನು ಖಂಡಿಸಿದ ವಿವಿಧ ಮಾಧ್ಯಮಗಳು ಸರ್ಕಾರಿ ಕಾರ್ಯಕ್ರಮ ಸುದ್ದಿ ಮಾಡಲು ಅವಕಾಶ ನೀಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.