ಧ್ಯಾನದಲ್ಲಿಯೇ ಜೀವ ಸವೆಸಿದ ಯೋಗಿನಿ ಮಾಣಿಕೇಶ್ವರಿ
ಯಾನಾಗುಂದಿ ಮಾತಾ ಮಾಣಿಕೇಶ್ವರಿ ವಿಧಿವಶ
ಯಾದಗಿರಿಃ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ (87)ಶನಿವಾರ ಲಿಂಗೈಕೆಯಾದರು.
ಯಾನಾಗುಂದಿಯ ಬೆಟ್ಟದ ಗವಿಯೊಂದರಲ್ಲಿ ಸದಾ ಶಿವ ಧ್ಯಾನದಲ್ಲಿ ತಲ್ಲೀನರಿರುತ್ತಿದ್ದ ತಾಯಿ ಮಾಣಿಕೇಶ್ವರಿ ಅನ್ನ ನೀರನ್ನು ತ್ಯೇಜಿಸಿದ್ದರು. ವರ್ಷಗಟ್ಟಲೇ ಮಾತೆ ಮಾಣಿಕೇಶ್ವರಿ ಗುಹೆಯಿಂದ ಹೊರ ಬರುತ್ತಿರಲಿಲ್ಲ. ಪ್ರತಿ ಶಿವರಾತ್ರಿಯಂದು ಭಕ್ತರಿಗೆ ದರ್ಶನ ನೀಡುತ್ತಿದ್ದರು. ಅಂದು ಲಕ್ಷಾಂತರ ಜನ ಸೇರುತ್ತಿದ್ದರು.
ಅನ್ನ, ನೀರು ಸಹ ತ್ಯೇಜಿಸಿದ್ದ ಅವರು ಅಗಾಧ ಧ್ಯಾನ, ಮೌನವ್ರತ ಮೂಲಕ ಭಕ್ತರನ್ನು ಸೆಳೆದಿದ್ದ ಅವರು, ಕಾಲಕಾಲಕ್ಕೆ ಅವರು ನುಡಿದ ಭವಿಷ್ಯ ವಾಣಿಗಳು ನಿಜವಾಗಿದ್ದವು. ಬಾಲ್ಯದಿಂದಲೇ ಧಾರ್ಮಿಕತೆಗೆ ಒಗ್ಗಿಕೊಂಡ ಮಾಣಿಕೇಶ್ವರಿ ಪವಾಡ ಸೃಷ್ಟಿಸಲಾಭಿಸಿದ್ದಳು.
ಬಾಲ್ಯ ವಿವಾಹ ಆದ ಮೂರು ವರ್ಷದಲ್ಲಿಯೇ ಮನೆಯನ್ನು ತ್ಯೇಜಿಸಿ ಅಡವಿಗೆ ಕುರಿ ಕಾಯಲು ಹೋದ ವೇಳೆ ಮರವೇರಿ ಧ್ಯಾನಾಸಕ್ತಳಾಗಿದ್ದಳು.
ಈಕೆಯ ಧಾರ್ಮಿಕ ಆಚರಣೆ, ಧ್ಯಾನ, ಶಿವ ಸ್ಮರಣೆ ಕಂಡು ಗಂಡನ ಮನೆಯವರು ಆಶ್ಚರ್ಯ ಚಕಿತರಾಗಿ, ತವರು ಮನೆಯವರಿಗೆ ಎಲ್ಲಾ ವಿಷಯ ತಿಳಿಸಿ ಬುದ್ಧಿವಾದ ಹೇಳಿದರೂ ಕೇಳದ ಮಾತಾ ಮಾಣಿಕೇಶ್ವರಿ ಕುಟುಂಬಸ್ಥರನ್ನು ಬಿಟ್ಟು ಗಿಡ, ಮರಗಳ ಮೇಲೆಯೇ ಅನ್ನ ನೀರು ಬಿಟ್ಟು ವಾರಗಟ್ಟಲೇ ಧ್ಯಾನ ಆರಂಭಿಸಿದಳು.
ಆಗ ಜನರು ಈಕೆ ಶಕ್ತಿ ಮಾತೆ ಎಂದು ಮರದಿಂದ ಧ್ಯಾನದ ವ್ರತದಿಂದ ಕೆಳಗಿಳಿಸಲು ಭಜನೆ ಸತ್ಸಂಗ ಆಚರಣೆ ಮಾಡಿ ಆಕೆಗೆ ಭಕ್ತಿಪೂರ್ವಕನ ನಮಿಸಿ ತಮ್ಮ ಕಷ್ಟ ಕಾರ್ಪಣ್ಯಗಳು ಹೇಳ ತೊಡಗಿದು. ಭಕ್ತರ ಕಣ್ಣೀರೊರಿಸಿದ ಮಾತೆ ಜನಜನಿತಳಾಗಿ ಲಕ್ಷತರ ಭಕ್ತರನ್ನು ಹೊಂದಿದಳು.
ನಾಡಿನಾದ್ಯಂತ ಮಾತೆ ಮಾಣಿಕೇಶ್ವರಿಯ ನುಡಿದ ಮಾತುಗಳು ನಿಜವಾಗುವದನ್ನು ಕಂಡು ಭಕ್ತರೂ ನಡೆದಾಡುವ ದೇವರು, ಶಕ್ತಿ ಮಾತೆಯಂದು ಮಾತೆಯನ್ನು ಪೂಜಿಸ ಹತ್ತಿದರು.
ಇಂದಿಗೂ ಅಪಾರ ಭಕ್ತಕೂಟ ಹೊಂದಿದ ಅವರು, ಒಂದಿಲ್ಲೊಂದು ವೈಶಿಷ್ಟ್ಯ ಪೂರ್ವ ತಮ್ಮ ಶಕ್ತಿಯನ್ನು ತೋರುತ್ತಿದ್ದಾರೆ. ಈಚೆಗೆ ವಯೋಸಹಜದಿಂದ ಅವರು ಅಸ್ವಸ್ಥ ಹೊಂದಿದ್ದರು.
ಮಾತಾ ಮಾಣಿಕೇಶ್ವರಿ ಇನ್ನಿಲ್ಲ ಎಂಬ ಸುದ್ದಿ ತಿಳಿದ ಭಕ್ತ ಸಮೂಹ ಕಣ್ಣೀರು ಹಾಕ್ತಿದೆ. ನಿನ್ನೆಯೇ ಮಾತಾ ಮಾಣಿಕೇಶ್ವರಿ ನಾನು ಕೈಲಾಸಕ್ಕೆ ಹೋಗುವೆ ಎಂಬ ಮಾತನ್ನು ಅವರ ಭಕ್ತರೊಬ್ಬರ ಮುಂದೆ ಹೇಳಿದ್ದರಂತೆ, ಆದರೆ ಅವರಿಗೆ ನಿನ್ನೆ ಅರ್ಥವಾಗಿರಲಿಲ್ಲ ಇಂದು ನಿಜಕ್ಕೂ ಮಾತೆ ನಮ್ಮೆಲ್ಲರನ್ನೂ ತೊರೆದು ಕೈಲಾಸಕ್ಕೆ ಹೊರಟಿದ್ದಾರೆ ಎಂಬುದನ್ನ ಅರಿತ ಭಕ್ತ ಸಂಕಟದಿಂದಲೇ ಹೇಳುತ್ತಿದ್ದಾರೆ.
ಭಕ್ತರ ಸಂಕಟ ದೂರ ಮಾಡಿ ಬೇಡಿದ ವರವ ನೀಡಿದ ಜೀವಂತ ದೇವತೆ ಮಾತಾ ಮಾಣಿಕೇಶ್ವರಿ ವಿಧವಶರಾದರೂ ಭಕ್ತ ಮನದಲ್ಲಿ ನೆಲೆಸಿದ್ದು, ಬೇಡಿ ಬಂದ ಭಕ್ತರನ್ನು ಉದ್ಧರಿಸಲಿ ಮಾತೆಯ ಸ್ಮರಿಸಿದವರ ಕತ್ತಲೆ ಕಳೆದು ಬೆಳಕಿನಡೆಗೆ ದಾರಿ ತೋರಲಿ ಮಾತೆಯು, ಅವರು ಧ್ಯಾನಿಸುತ್ತಿದ್ದ ಶಿವನ ಗುಹೆಯಿಂದ ಮುಂದೆ ಬಂದ ಭಕ್ತರಿಗೆ ಅಗೋಚರವಾಗಿಯೇ ಆಶೀರ್ವದಿಸಲಿದ್ದಾಳೆ ಎಂದು ಅಲ್ಲಿನ ಭಕ್ತರ ಅಂಬೋಣ.
ರವಿವಾರ ಬೆಳಗ್ಗೆ 10 ಗಂಟೆಗೆ ಮಾತೆ ಅನುಷ್ಠಾನ ಗೈದ ಗುಹೆಯಲ್ಲಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಡಲಾಗಿದೆ ಎಂದು ಅಲ್ಲಿನ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಮೂಲಕ ಮಾಹಿತಿ ಬಂದಿದೆ.
ಮಾತೆ ಮಾಣಿಕೇಶ್ವರಿ ಜನನ ವಿವರ
ಜನನ:26-7-1934
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಲ್ಲಾಬಾದ.
ತಂದೆ :ಬುಗ್ಗಪ್ಪ
ತಾಯಿ:ಆಶೆಮ್ಮ
ತಂದೆ ತಾಯಿಗೆ: 4 ಜನ ಮಕ್ಕಳು
4 ನೇ ಮಗಳು : ಮಾಣಿಕೇಶ್ವರಿ
9 ವಯಸ್ಸಿನಲ್ಲಿ ಯೇ ಬಾಲ್ಯ ವಿವಾಹ
ಸೇಡಂ ತಾಲೂಕಿನ ಶಿಲಾರಕೊಟರಕಿ ಗ್ರಾಮದ ಮಾಣಿಕಪ್ಪ ಎಂಬಾತನ ಜೊತೆ ವಿವಾಹ ಮಾಡಿ ಕೊಡಲಾಗಿತ್ತು. (ಬಾಲ್ಯ ವಿವಾಹ)