ಜೀವನ ಸಾರ್ಥಕತೆಗೆ ಪರೋಪಕಾರಿ ಗುಣ ಅಳವಡಿಸಿಕೊಳ್ಳಿಃ ಕಾಳಹಸ್ತೇಂದ್ರಶ್ರೀ
ಶಿವಶೇಖರಪ್ಪಗೌಡ ಶಿರವಾಳರ 8 ನೇ ಪುಣ್ಯಸ್ಮರಣೆ
ಯಾದಗಿರಿಃ ಮನುಷ್ಯ ಇರುವಷ್ಟು ಕಾಲ ಮತ್ತೊಬ್ಬರ ಕಷ್ಟಗಳಿಗೆ ಸ್ಪಂಧಿಸುವ ಗುಣ ಮೈಗೂಡಿಸಿಕೊಂಡಾಗ ಮಾತ್ರ ಅವರ ಪರೋಪಕಾರ ಜನ್ಮ ಸಾರ್ಥಕವಾಗುತ್ತದೆ ಎಂದು ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಮಾಜಿ ಶಾಸಕ ಲಿಂ.ಶಿವಶೇಖರಪ್ಪಗೌಡ ಶಿರವಾಳರ ಅವರ 8 ನೇ ಪುಣ್ಯಸ್ಮರಣೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಧಾರ್ಮಿಕ ವಾತಾವರಣದಲ್ಲಿ ಪುಣ್ಯದ ಕಾರ್ಯಗಳು ಮತ್ತು ಸಂಸ್ಕಾರವಂತರಾಗಿ ಬಾಳಬೇಕು.
ಈ ದಿಸೆಯಲ್ಲಿ ಶಿವಶೇಖರಪ್ಪಗೌಡರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಇರುವಷ್ಟುಕಾಲ ಧಾರ್ಮಿಕ ನಿಷ್ಠೆಯಲ್ಲಿ ಗುರುಪರಂಪರೆಯ ಬಗ್ಗೆ ಅಪಾರ ಕಾಳಜಿಹೊಂದಿದ್ದ ಅವರು, ದೀನ ದುರ್ಬಲರಿಗೆ ಸಹಕಾರ ನೀಡುತ್ತ ಪರೋಪಕಾರ ಧರ್ಮವನ್ನು ಮೈಗೂಡಿಸಿಕೊಂಡ ರಾಜಕಾರಣಿಯಾಗಿದ್ದರು. ಅವರ ತರುವಾಯ ಅವರ ಹೆಸರಲ್ಲಿ ಪ್ರಸ್ತುತವಾಗಿ ಅವರ ಚಿರಂಜೀವಿ ಶಾಸಕ ಗುರುಪಾಟೀಲರೂ ಸುತ್ತಲೂ ಪರಿಸರ ಚನ್ನಾಗಿರಬೇಕು, ಸರ್ವರೂ ಆರೋಗ್ಯವಂತರಾಗಿರಬೇಕು ಎಂದು ಕಳೆದ ಮೂರು ವರ್ಷಗಳಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಶಿಬಿರಗಳನ್ನು ಮಾಡುವ ಮೂಲಕ ತಂದೆಯ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ ಎಂದರು.
ಕಡಕೋಳಮಠದ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಮನುಷ್ಯರಾದವರು ಮಾನವತವಾದ ಮತ್ತು ಸಮಾಜವಾದದ ತತ್ವ ಸಿದ್ಧಾಂತದ ಅಡಿಯಲ್ಲಿ ಬದುಕಿದಾಗಲೇ ಪುಣ್ಯಸ್ಮರಣೆಗೆ ಅರ್ಹರಾಗುತ್ತಾರೆ. ಶಿವಶೇಖರಪ್ಪಗೌಡರ ಮನಸ್ಸು ಮಗುವಿನಂತಿತು.್ತ ಜನಪ್ರತಿನಿಧಿಗಳಾಗಿ ಒಂದು ದಿನವು ಅಧಿಕಾರಿದ ದರ್ಪ ತೋರಲಿಲ್ಲ ಎಲ್ಲರೊಡನೆ ಸೌಜನ್ಯಯುತವಾಗಿ ನಡೆದುಕೊಳ್ಳುವ ಮೂಲಕ ಸಗರನಾಡಿನ ಶರಣಜೀವಿಯಾಗಿದ್ದರು ಎಂದರು. ಪ್ರಮುಖರಾದ ಅಮಾತೆಪ್ಪ ಕಂದಕೂರು, ಮಲ್ಲಣ್ಣಮಡ್ಡಿ, ಭೀಮಯ್ಯಗೌಡ ಕಟ್ಟಿಮನಿ, ಡಾ.ಮಲ್ಲಣ್ಣ ಗೌಡ ಉಕ್ಕಿನಾಳ, ತಾಹೇರ ಖಾಜಿ ಕೆಂಭಾವಿ ಪುಣ್ಯಸ್ಮರಣೆ ಕುರಿತು ಮಾತನಾಡಿದರು.
ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು, ಚರಬಸವೇಶ್ವರ ಗದ್ದುಗೆಯ ಬಸವಯ್ಯ ಶರಣರು, ಫಕಿರೇಶ್ವೆರ ಮಠದ ಗುರುಪಾದ ಸ್ವಾಮಿಗಳು, ಸಗರ ಒಕ್ಕಲಿಗೇರ ಮಠದ ಮರುಳಮಹಾಂತ ಶಿವಾಚಾರ್ಯರು, ಗುಂಬಳಾಪುರ ಮಠದ ಪೂಜ್ಯ ಸಿದ್ದೇಶ್ವರ ಶಿವಾಚಾರ್ಯರು, ಸೂಗೂರೇಶ್ವರ ಶಿವಾಚಾರ್ಯರು, ಶಾಂತಲಿಂಗ ಶಿವಾಚಾರ್ಯರು, ಚನ್ನವೀರ ದೇವರು, ಶಿವಲಿಂಗರಾಜ ದೇಶಿಕೇಂದ್ರ ಶ್ರೀ, ಗೋಗಿ ಸಜ್ಜಾದೆ ಸಯ್ಯದ್ ಅಥಿಕ್‍ವುಲ್ಲಾ ಹುಸೇನ ದರ್ಗಾ ಗೋಗಿ, ಸಯ್ಯದ್ ಇಸ್ಮಾಯಿಲ್ ಹುಸೇನಿ, ಸಿದ್ರಾಮಯ್ಯ ಸ್ವಾಮಿಗಳು ಉಪಸ್ಥಿತರಿದ್ದರು.
ಮಾಂಗೀಲಾಲ್ ಜೈನ್, ಶಂಬಣ್ಣ ಎತ್ತಿನ ಮನಿ, ಅಮರೇಶ ವಿಭೂತಿಹಳ್ಳಿ, ರಾಮಚಂದ್ರ ಕಾಶಿರಾಜ, ರಾಜಶೇಖರ ನಗನೂರು, ಮಹೇಶ ಆನೇಗುಂದಿ, ಬಸವರಾಜ ಅನೇಗುಂದಿ, ಮೋನಪ್ಪ ಕಿಣ್ಣಿಸಂಗಣ್ಣ ಮೋಟಿಗಿ, ಮಲ್ಲಿಕಾರ್ಜುನ ಚೌದರಿ, ವಸಂತ ಸುರಪುರ, ಲಾಲಹ್ಮದ ಖುರೇಶಿ, ಸೋಮಶೇಖರ ಕಾಂಗ್ರೆಸ್, ವೆಂಕಟೇಶ ದೊರೆ ಸೇರಿದಂತೆ ಶಿವಪುತ್ರಪ್ಪಗೌಡ ಶಿರವಾಳ, ಶಾಸಕ ಗುರುಪಾಟೀಲ ಶಿರವಾಳ ಸೇರಿದಂತೆ ಶಿರವಾಳ ಅಭಿಮಾನಿಗಳು, ಹಿತೈಶಿಗಳು ಭಾಗವಹಿಸಿದ್ದರು.
ಆರೋಗ್ಯ ಶಿಬಿರಃ ಕಳೆದ ಮೂರು ವರ್ಷಗಳಿಂದಲೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೃತಕ ಕೈ ಕಾಲು ಜೋಡಣೆ, ಪೋಲಿಯೊ ಶಸ್ತ್ರ ಚಿಕಿತ್ಸೆ, ಹೃದಯ ಸಂಬಂಧಿ ಕಾಯಿಲೆ, ಕಣ್ಣಿನ ಚಿಕಿತ್ಸೆ ಸೇರಿದಂತೆ ಅನೇಕ ಶಿಬಿರ ಹಮ್ಮಿಕೊಂಡಿದ್ದು ಪ್ರಸಕ್ತವಾಗಿ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ 3 ದಿನ ಆಯೋಜಿಸಿದ್ದು ಒಂದೇ ದಿನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ 500 ಜನರ ನೋಂದಣಿಯಾಗಿರುವುದು ಪುಣ್ಯಸ್ಮರಣೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.