ಪ್ರಮುಖ ಸುದ್ದಿ
ವಿದ್ಯುತ್ ವಿತರಣ ಕೇಂದ್ರಃ ಅಗ್ನಿ ಅವಘಡ, ಸಿಬ್ಬಂದಿ ಪಾರು
ವಿದ್ಯುತ್ ವಿತರಣ ಕೇಂದ್ರದಲ್ಲಿ ಅಗ್ನಿ ಅವಘಡ, ಅಪಾಯದಿಂದ ಪಾರಾದ ಜೆಸ್ಕಾಂ ಸಿಬ್ಬಂದಿ
ಯಾದಗಿರಿ: ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಶಾಟ್೯ ಸರ್ಕ್ಯೂಟ್ ನಿಂದ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ಪ್ರಮಾಣದ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿದ್ದು, ಸ್ಥಳದಲ್ಲಿದ್ದರೆ 4 ಜನ ಜೆಸ್ಕಾಂ ಸಿಬ್ಬಂದಿಗಳು ಹೊರ ಬರುವ ಮೂಲಕ ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ನಡೆದಿದೆ.
ಕಕ್ಕೇರ ಪಟ್ಟಣದ 33 ಕೆವಿ ವಿತರಣಾ ಕೇಂದ್ರದಲ್ಲಿ ಈ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇಂದ್ರದಲ್ಲಿದ್ದ ವಿದ್ಯುತ್ ಸರಬರಾಜಿಗೆ ಬೇಕಾದ ವಿವಿಧ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತಿದ್ದಾರೆ ಮತ್ತು ಕೇಂದ್ರದ ಜೆಸ್ಕಾಂ ಸಿಬ್ಬಂದಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸುತಿದ್ದಾರೆ ಎಂದು ಮೂಲಗಳು ತಿಳಿಸಿವೆ.