ಶಹಾಪುರಃ ಮೋಹರಂ ಕೊನೆ ದಿನ ಪೀರಗಳ ದಫನ್, ಮೆರವಣಿಗೆ
ಮೋಹರಂ ಕೊನೆ ದಿನ ಪೀರಗಳ ದಫನ್
yadgiri, ಶಹಾಪುರಃ ಮೋಹರಂ ಕೊನೆಯ ದಿನವಾದ ರವಿವಾರ ನಗರದ ಹಲವು ಬಡಾವಣೆಯಲ್ಲಿ ಕುಳಿತಿದ್ದ ಪೀರಗಳನ್ನು ಧಪನ್ ಮಾಡಲಾಯಿತು. ಸಂಜೆ 7 ಗಂಟೆಯಿಂದಲೇ ಪೀರಗಳ ದಫನ್ ಕಾರ್ಯಾರ್ಥವಾಗಿ ಪೀರಗಳನ್ನು ಹಸೇನ್ ಹುಸೇನ್ ಕೀ ದೋಸ್ಚರ ಹೋ ದೀನ್ ಎಂದು ಪೀರಗಳನ್ನು ನಗರದ ಹೊರಲವಯ ಮಾವಿನ ಕೆರೆ ಮತ್ತು ನಾಗರ ಕೆರೆ ದಂಡೆಯಲ್ಲಿ ಒಯ್ದು ದಫನ್ ಕಾರ್ಯವನ್ನು ವಿಧಿವಿಧಾನ ಪ್ರಕಾರ ಮಾಡಲಾಯಿತು.
ಮೊದಲಿಗೆ ನಗರದ ಲಿಂಗದ ಗುಡಿ ಪೀರಗಳು ಸಂಜೆ 7 ಗಂಟೆಗೆ ಮೆರವಣಿಗೆ ಮೂಲಕ ಬೆಟ್ಟದ ಮೇಲಿರುವ ಪುಸ್ತಫಾ ಪೌಢಿ ದರ್ಗಾದಕ್ಕೆ ತೆರಳಿದವು. ಅಲ್ಲಿ ವಿಶೇಷವಾಗಿ ಲಿಂಗದು ಗುಡಿ ಪೀರಗಳಿಗೆ ಚೋಂಗೆ, ಮಾಲ್ದಿ ಸೇರಿದಂತೆ ಇತರೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ದಫನ್ ಕಾರ್ಯ ಮುಗಿಸಲಾಯಿತು.
ಇನ್ನು ಉಳಿದಂತೆ ನಗರದ ಪ್ರಮುಖ ಮಸೀದಿಗಳ ದೊಡ್ಡ ಪೀರಗಳು ತಡರಾತ್ರಿಗೆ ದಫನ್ ಕಾರ್ಯ ಮೆರವಣಿಗೆ ನಡೆಯಲಿದೆ. ಕೊರೊನಾ ಇರುವದರಿಂದ ಮೋಹರಂ ಅಷ್ಟೇನು ಸಂಭ್ರಮ ಕಾಣಲಿಲ್ಲ. ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಿದ್ದರು. ಹೀಗಾಗಿ ಜನವು ಕಡಿಮೆ ಇತ್ತು. ಸಾಂಪ್ರದಾಯಿಕವಾಗಿ ಸರಳವಾಗಿ ಮೋಹರಂ ಆಚರಿಸಲಾಯಿತು ಎಂದು ಭಕ್ತಾಧಿಗಳು ತಿಳಿಸಿದ್ದಾರೆ.
ನಗರದ ಶಹಾಪುರ ಪೇಠನಲ್ಲಿ ಹಿಮಾಮ್ ಖಾಸಿಂ ಪೀರ ಮತ್ತು ಮಣಿಗಿರಿ ಪೀರ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಮಸೀದಿ ಶೃಂಗರಿಸಿ, ಪೀರಗಳನ್ನು ಅಲಂಕರಿಸಿ ಕೂಡಿಸಿದ್ದರು.
ಕೊರೊನಾ ಕಂಟಕದಿಂದ ಮೆರವಣಿಗೆ ಇತರೆ ಸಾಂಪ್ರದಾಯಿಕ ಸಾಂಸ್ಕøತಿಕ ಕಾರ್ಯಗಳನ್ನು ಈ ಬಾರಿ ಮಾಡಲಾಗಿಲ್ಲ ಎಂದು ಭಕ್ತಾಧಿಗಳು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಕೊರೊನಾ ರೋಗಕ್ಕೆ ಮುಕ್ತಿ ದೊರೆಯಲಿ ಮುಂಬರುವ ದಿನಗಳಲ್ಲಿ ಹಬ್ಬವನ್ನು ಜೋರಾಗಿ, ಸಾಂಸ್ಕೃತಿಕ ಸಾಂಪ್ರದಾಯಿಕ ಸಂಭ್ರಮದೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತೇವೆ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಮುಖಂಡರಾದ ಪಾಶಾ ಪಟೇಲ್, ಶಕೀಲ್ ಮುಲ್ಲಾ, ಅಜೀಮ್ ಜಾಗಿರದಾರ ಸೇರಿದಂತೆ ಇತರರು ಆಶಯ ವ್ಯಕ್ತಪಡಿಸಿದ್ದಾರೆ.




