ಶೋಷಿತರನ್ನ ಬಲಿಷ್ಠತೆಗೊಳಿಸಿದ್ದು ಸಂವಿಧಾನ – ರಾಜರತ್ನಂ ಅಂಬೇಡ್ಕರ್
ಯಾದಗಿರಿಃ 2500 ವರ್ಷದ ಮನುಸ್ಮೃತಿ ಮೂಲಕ ಬದುಕು ಕಟ್ಟಿಕೊಂಡವರಿಗೆ ಕೇವಲ 70 ವರ್ಷದ ಸಂವಿಧಾನದಂತೆ ಬದುಕಲು ಆಗುತ್ತಿಲ್ಲವೇ ಯಾಕೆ.? ಎಂಬುದನ್ನು ಚಿಂತನೆ ಮಾಡಬೇಕಿದೆ ಎಂದು ಡಾ.ಅಂಬೇಡ್ಕರ್ ಅವರ ಮರಿ ಮೊಮ್ಮಗ ರಾಜರತ್ನಂ ಅಂಬೇಡ್ಕರ್ ಅವರು ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಸಂವಿಧಾನ ಸಂರಕ್ಷಣಾ ಆಂದೋಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಸ್ಮೃತಿ ಪದ್ಧತಿ ಅನುಸರಿಸಿ ಹಿಂದುಳಿ ವರ್ಗ, ದಲಿತರು ಸಾಕಷ್ಟು ಶೋಷಣೆಗೊಳಪಟ್ಟಿದ್ದು, ಯಾವುದೇ ಸಮರ್ಪಕ ಶಿಕ್ಷಣ, ಪ್ರಯಾಣ, ಅಷ್ಟೇ ಯಾಕೇ ಕುಡಿಯಲು ನೀರು ದೊರೆಯದಂಥ ಕಷ್ಟಕರ ಕಾಲದಲ್ಲಿ ನಮ್ಮ ಬಂಧುಗಳು ಬದುಕಿದ್ದಾರೆ.
ಡಾ.ಅಂಬೇಡ್ಕರರು ಸ್ವತಃ ತಾವೂ ಅನುಭವಿಸಿದ ಅಂದಿನ ಪಕ್ಷಪಾತಿ ನೀತಿ, ಜಾತಿಯತೆಯನ್ನು ಕಂಡು ತನ್ನ ಜನ ಎಂತಹ ಸಮಸ್ಯೆ ಸುಳಿಯಲ್ಲಿದ್ದಾರೆ ಅವರನ್ನು ಮೇಲೆತ್ತಬೇಕು ಶೋಷಿತರಿಗೆ ನ್ಯಾಯಸಿಗಬೇಕು ಮನುಜರೆಲ್ಲ ಒಂದೇ ಇದೇ ನೆಲದಲ್ಲಿ ಅವರೂ ಉತ್ತಮ ಬದುಕು ನಡೆಸಬೇಕೆಂಬ ಕಾರಣದಿಂದ ಬಾಬಾ ಸಾಹೇಬರು ಸಂವಿಧಾನದ ಮೂಲಕ ಹಕ್ಕು ಒದಗಿಸಿಕೊಟ್ಟಿದ್ದಾರೆ.
ಆ ಕಾರಣಕ್ಕೆ ಇಂದು ನಾವೆಲ್ಲ ಇಂದು ಶುದ್ಧವಾದ ಬಾಟಲ್ ನೀರು ಕುಡಿಯುತ್ತಿದ್ದೇವೆ. ಉತ್ತಮ ಶಿಕ್ಷಣ ಪಡೆಯುತ್ತಿದ್ದೇವೆ ಅಲ್ಲದೆ ವಿಮಾನದಲ್ಲಿ ಸಂಚಾರ ಮಾಡುತ್ತಿದ್ದೇವೆ ಆ ಕಾರಣ ಇವರಿಗೆಲ್ಲ ಹೊಟ್ಟೆಕಿಚ್ಚು ದಲಿತರು ಮುಂದೆ ಬರಬಾರದು ಜಾಗೃತರಾಗ ಬಾರದು ಎಂಬುದೇ ದೇಶ ಆಳುತ್ತಿರುವ ಬ್ರಾಹ್ಮಣ ರ ಉದ್ದೇಶವಾಗಿದೆ ಆ ಕಾರಣಕ್ಕೆ ಇವರಿಗೆ ಸಂವಿಧಾನ ಬೇಕಿಲ್ಲ ಸಂವಿಧಾನ ಬದಲಾಯಿಸಬೇಕು ಎಂಬ ದುರುದ್ದೇಶ ಹೊಂದಿದ್ದಾರೆ ಎಂದರು.
ಇವಿಎಂ ನಲ್ಲಿ ಅಕ್ರಮ ಎಸಗಲಾಗುತ್ತಿದೆ. ಸಿಎಎ, ಎನ್ ಆರ್ ಸಿ ಮೂಲಕ ದೇಶವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ. ದೇಶದ ಮೂಲನಿವಾಸಿಗಳನ್ನೇ ಇವರು ದೂರುತಗತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಸಲಾದಪುರ, ನೀಲಕಂಠ ಬಡಿಗೇರ, ಅಬೀಬ ಸರಮತ್, ಸಯ್ಯದ್ ಖಾದ್ರಿ, ಅಜಯ್ ಯಳಸಂಗಿಕರ್, ಮಾನಪ್ಪ ಹೊಸಮನಿ, ಎಸ್ಡಿಪಿಐ ಖಾಲಿದ್, ಶಿವಕುಮಾರ ತಳವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮೈಸೂರಿನ ಬಹುಜನ ಪೀಠದ ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿದ್ಯವಹಿಸಿದ್ದರು. ರಾಯಪ್ಪ ಸಾಲಿಮನಿ ಹಾರಣಗೇರಾ ಅಧ್ಯಕ್ಷತೆವಹಿಸಿದ್ದರು.