ಪ್ರಮುಖ ಸುದ್ದಿ

ಡಿಸಿಪಿ ರವಿ‌ ಚನ್ನಣ್ಣನವರ ಆಗಮನ ಸಂಜೆ‌ ಕಾರ್ಯಕ್ರಮದಲ್ಲಿ ಭಾಗಿ

ಡಿಸಿಪಿ ರವಿ‌ ಚನ್ನಣ್ಣನವರ ಆಗಮನ ಸಂಜೆ ಕಾರ್ಯಕ್ರಮದಲ್ಲಿ ಭಾಗಿ

ಶಹಾಪುರಃ ಕೆಲ ಗಂಟೆಗಳ ಹಿಂದೆ ಬೆಂಗಳೂರನಿಂದ ಹೈದ್ರಾಬಾದ್ ಇಂಟರ್ ನ್ಯಾಷನಲ್‌ ಏರಪೋರ್ಟ್ ಗೆ ಆಗಮಿಸಿದ ಡಿಸಿಪಿ ರವಿ‌ ಡಿ.ಚನ್ನಣ್ಣನವರ್ ಶಹಾಪುರ ಯುವ ಬಳಗ ಸ್ವಾಗತಿಸಿದೆ.

ಈಗಾಗಲೇ ಯಾದಗಿರಿ‌ ಜಿಲ್ಲೆ ಪ್ರವೇಶಿಸಿರುವ ರವಿ‌‌ ಚನ್ನಣ್ಣನವರು, ಯಾದಗಿರಿಯಲ್ಲಿ ಅವರ ಗೆಳೆಯರ ಬಳಗ ಮತ್ತು ಅಭಿಮಾನಿಗಳಿಗೆ ಭೇಟಿಯಾಗಿ‌ ಕುಶಲೋಪರಿ ವಿಚಾರಿಸಿ ಅಭಿಮಾನಿಗಳಿಂದ ಸತ್ಕಾರಿಸಲ್ಪಡುತ್ತಿದ್ದು, ನಂತರ ಶಹಾಪುರ ನಗರಕ್ಕೆ‌ಆಗಮಿಸಲಿದ್ದಾರೆ ಎಂದು ಹಿರೇಮಠದ ಭಕ್ತ ವೃಂದ ತಿಳಿಸಿದೆ.

ಇಂದು ಸಂಜೆ‌ _6 ಗಂಟೆಗೆ ನಡೆಯುವ ದಸರಾ ಮಹೋತ್ಸವ ಅಂಗವಾಗಿ ವೀರ ಯೋಧರಿಗೊಂದು ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರಣ ಸಕಲರು ಸೇರಿದಂತೆ ಯುವ ಸಮುದಾಯ ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗಬಹಿಸಬೇಕೆಂದು ಶ್ರೀಮಠದ ಸೂಗುರೇಶ್ವರ ಶಿವಾಚಾರ್ಯರು ಕೋರಿದ್ದಾರೆ.

ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿ ಡಿಸಿಪಿ ರವಿಯವರು ಐಪಿಎಸ್ ಪಾಸಾಗಲು ಪಟ್ಟ ಶ್ರಮ ಅವರ ಬಡತನ‌ದ ಸಂಕೋಲೆಯಲ್ಲೂ‌ ಬೆಳೆದು ಬಂದ‌ ಹಾದಿ ಯುವಕರಿಗೆ ಸ್ಪೂರ್ತಿ.

ಕಾರಣ ಎಲ್ಲರೂ ಭಾಗವಹಿಸಿ ಅವರ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಈಗಲೇ ತಡಮಾಡದೆ ಎಲ್ಲರೂ ಸಿಪಿಎಸ್ ಶಾಲಾ‌ ಮೈದಾನದ ಕಡೆ ಬನ್ನಿ‌ ರವಿ ಚನ್ನಣ್ಞನವರ ಮಾತುಗಳನ್ನು ಆಲಿಸಿ‌ ಅವರ ನಡೆದು ಬಂದ ದಾರಿ ಯುವಕರಿಗೆ ಆದರ್ಶವಾಗಲಿದೆ.

ಹಿರಿಯರು ಶಾಲಾ ಮಕ್ಕಳನ್ನು ಕರೆ ತನ್ನಿ ಇಂತಹ ದಕ್ಷ ಅಧಿಕಾರಿಗಳು ನಮ್ಮ ಭಾಗಕ್ಕೆ ಬರೋದು ಅಪರೂಪ‌ ಬಂದಿದ್ದಾರೆ. ಇವರಿಂದ ಈ‌ ಭಾಗದ ಶಾಲಾ‌ ಮಕ್ಕಳಿಗೆ‌ ಯುವ‌ ಸಮಾಜಕ್ಕೆ ಒಂದಿಷ್ಟು ಒಳಿತಾದಿತು ಸ್ಪೂರ್ತಿ ದೊರೆಯಲಿದೆ ಎಂಬುದೇ ನಮ್ಮ ಆಶಯ ಎಲ್ಲರೂ ಬನ್ನಿ ಪಾಲ್ಗೊಳ್ಳಿ.

Related Articles

Leave a Reply

Your email address will not be published. Required fields are marked *

Back to top button