ಪ್ರಮುಖ ಸುದ್ದಿ
ಚಿತ್ರದುರ್ಗಃ ಬಿರುಗಾಳಿಗೆ ಗಾಳಿಯಂತ್ರದ ರೆಕ್ಕೆಗಳಿಗೆ ಹಾನಿ
ಗಾಳಿಯಂತ್ರದ ರೆಕ್ಕೆಗಳಿಗೆ ಹಾನಿ, ಮೊಬೈಲ್ ನಲ್ಲಿ ವೈರಲ್
ಚಿತ್ರದುರ್ಗಃ ಭಾರಿ ಬಿರುಗಾಳಿಗೆ ಗಾಳಿಯಂತ್ರದ ರೆಕ್ಕೆಗಳು ಧಕ್ಕೆಯಾಗಿದ್ದು ರೆಕ್ಕೆಗಳು ಮಣಿದು ಹೋದ ಘಟನೆ ತಾಲೂಕಿನ ಕುರುಮರಡಿಕೆರೆ ಗ್ರಾಮದ ಬಳಿ ಗಿರಿಧಾಮದಲ್ಲಿ ನಡೆದಿದೆ.
ಗಾಳಿಯಂತ್ರದ ರೆಕ್ಕೆ ತುಂಡಾಗುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ವೈರಲ್ ಆಗಿದೆ.
ಬೃಹತ್ ಗಾಳಿಯಂತ್ರದ 3 ರೆಕ್ಕೆ ಮುರಿದು ಬೀಳುವ ದೃಶ್ಯ ಎಲ್ಲರ ವಾಟ್ಸ್ ಪ್ ನಲ್ಲಿ ಹರಿದಾಡುತ್ತಿದೆ. ಗಾಳಿಯಂತ್ರದ ರೆಕ್ಕೆ ತುಂಡಾಗುವ ದೃಶ್ಯ ಕಂಡು ಗ್ರಾಮದ ಜನರಲ್ಲಿ ಆತಂಕ ಉಂಟಾಗಿದೆ.
ಬಿರುಗಾಳಿಗೆ ಮಣಿದ ಯಂತ್ರದ ರೆಕ್ಕೆಗಳು ಮುರಿದು ಗಾಳಿಗೆ ಹಾರಿದ್ದರೆ ಅದರ ಪರಿಣಾಮ ಭಯಾನಕವಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು. ಪುಣ್ಯಕ್ಕೆ ಯಂತ್ರದ ರೆಕ್ಕೆಗಳು ಅಲ್ಲಿಯೇ ಮಣಿದಿವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಲಾಗಿದೆ.