ಪ್ರಮುಖ ಸುದ್ದಿ

G7 ಶೃಂಗಸಭೆ : ಮೋದಿ, ಟ್ರಂಪ್ ಭೇಟಿ ವೇಳೆ ಕಾಶ್ಮೀರ ವಿಷಯ ಪ್ರಸ್ತಾಪ!

ನವದೆಹಲಿ : ವಿಶೇಷ ಆಹ್ವಾನದ ಮೇರೆಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಫ್ರಾನ್ಸ್ ನ ಬಿಯಾರಿಟ್ಜ್ ನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಬಹುಪಕ್ಷೀಯ ಘಟಕಗಳ ಜತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಪ್ರಧಾನಿ ವಿಶ್ವದ ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಅಮೇರಿಕಾ ಅದ್ಯಕ್ಷ ಡೋನಾಲ್ಡ್ ಟ್ರಂಪ್ ರನ್ನು ಭೇಟಿ ಮಾಡಲಿದ್ದಾರೆ. ಡೋನಾಲ್ಡ್ ಟ್ರಂಪ್ ಅವರು ಜಮ್ಮು -ಕಾಶ್ಮೀರ ವಿಚಾರದ ಮದ್ಯಸ್ಥಿಕೆ ವಹಿಸುವ ಬಗ್ಗೆ ಮಾತನಾಡಿರುವ ಹಿನ್ನೆಲೆ ಆ ಬಗ್ಗೆ ಡೋನಾಲ್ಡ್ ಟ್ರಂಪ್ ಜತೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button