ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಕ್ರೈಸ್ತ ಘಟಕ ಉದ್ಘಾಟನೆ
ಕ್ರೈಸ್ತ ಸಮುದಾಯ ಮುಖ್ಯವಾಹಿನಿಗೆ ತರಲು ಜೆಡಿಎಸ್ ಪಣ
ಯಾದಗಿರಿಃ ನಗರದ ಹೊಸಳ್ಳಿ ಕ್ರಾಸ್ ಹತ್ತಿರ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಕ್ರೈಸ್ತ ಘಟಕದ ನೂತನ ಕಾರ್ಯಾಲಯವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಉದ್ಘಾಟಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರವಾಗಿದೆ. ಶಾಂತಿ, ಸಹಬಾಳ್ವೆಗೆ ಹೆಸರಾಗಿದ್ದು, ರಾಜ್ಯದಲ್ಲಿ ಕ್ರೈಸ್ತರನ್ನು ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜೆಡಿಎಸ್ ಅಲ್ಪಸಂಖ್ಯಾತರ ಕ್ರೈಸ್ತ ಘಟಕಗಳೆಂಬ ವೇದಿಕೆಯನ್ನು ಒದಗಿಸಿಕೊಟ್ಟಿದ್ದಾರೆ.
ಅದರಂತೆ ಯಾದಗಿರಿ ಜಿಲ್ಲಾ ಅಲ್ಪಸಂಖ್ಯಾತರ ಕ್ರೈಸ್ತ ಘಟಕವನ್ನು ಆರಂಭಿಸಲಾಗುತ್ತಿದ್ದು, ಕ್ರೈಸ್ತ್ ಸಮುದಾಯದವ ಅಭಿವೃದ್ಧಿಗಾಗಿ ಜೆಡಿಎಸ್ ಪಣ ತೊಟ್ಟಿದ್ದು, ಸಮುದಾಯದ ಬಂಧುಗಳು ಮಾಜಿ ಪ್ರಧಾನಿ ದೇವೆಗೌಡರ ಕೈಬಲಪಡಿಸಿದ್ದಲ್ಲಿ, ಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡಲಿದ್ದಾರೆ. ಕಾರಣ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಹೆಚ್.ಡಿ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಂಕಣಬದ್ಧರಾಗಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗುರುಮಠಕಲ್ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಏಸುರಾಜ್ ಬೆಳಗುಂದಿ, ಉಪಾಧ್ಯಕ್ಷ ನಿರಂಜನ್ ಕೋಟಗಿರಿ, ಬೆಂಜುಮಿನ್ ಬಳಿಚಕ್ರ ಮತ್ತು ಯಾದಗಿರಿ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ಸಾಮುವೇಲ್ ಕಣೇಕಲ್, ಉಪಾಧ್ಯಕ್ಷ ವಿಜಯಕುಮಾರ್ ಅಬ್ಬೆ ತುಮಕೂರ, ಜಾನ್‍ಸನ್ ಕೆ., ಇವರನ್ನು ನೇಮಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಕ್ರೈಸ್ತ ಘಟಕದ ಜಿಲ್ಲಾಧ್ಯಕ್ಷ ಬಾಲಮಿತ್ರ ಏಬೇಲ್, ವಿಜಯ ಕುಮಾರ ಬೆನಕನಹಳ್ಳಿ, ಏಸುರಾಜ್, ಸಾಮುವೇಲ್, ಪ್ರಕಾಶ, ಉದಯ, ಸುಮಿತ್ರ ಬಳಿಚಕ್ರ, ಕ್ರಿಷ್ಟಪೋರ್, ರಾಜು ಯಡ್ಡಳ್ಳಿ, ರಾಜು ಹೊಸಳ್ಳಿ, ಬಾಸ್ಕರ್ ಅಲ್ಲಿಪೂರ ಮತ್ತಿತರರು ಇದ್ದರು. ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಾನ್ ವೆಸ್ಲಿ ಕಂದಕೂರ ನಿರೂಪಿಸಿದರು.