ಭೀ.ಗುಡಿಯಲ್ಲಿ ಏ.28 ರಂದು ಸಾಮೂಹಿಕ ವಿವಾಹ
ಅಸ್ಪೃಶ್ಯರ ರಾಜಕೀಯ ಸಂಕಲ್ಪ ದಿನದ ಬೃಹತ್ ಸಮಾವೇಶ
ಯಾದಗಿರಿ, ಶಹಾಪುರಃ ಡಾ.ಬಾಬಾಸಾಹೇಬ್ ಅಂಬೇಡ್ಕರವರ 128 ನೇಯ ಜಯಂತಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಏ.28 ರಂದು ಉಚಿತ ಸರಳ ಸಾಮೂಹಿಕ ವಿವಾಹ ಮತ್ತು ಅಸ್ಪøಶ್ಯರ ರಾಜಕೀಯ ಸಂಕಲ್ಪ ದಿನದ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಸಮೀಪದ ಭೀಮರಾಯನ ಗುಡಿ ರಿಕ್ವೆಷ್ಟ್ ಸ್ಟಾಪ್ ಹತ್ತಿರ ಜರುಗಲಿದೆ ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಸಂಸ್ಥಾಪಕ, ಕಾರ್ಯಾಧ್ಯಕ್ಷ ಮಾರುತಿ ಜಂಬಗಾ ತಿಳಿಸಿದರು.
ನಗರದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವು ಉಚಿತ ಸಾಮೂಹಿಕ ವಿವಾಹ ಹಾಗೂ ಅಸ್ಪೃಶ್ಯರ ರಾಜಕೀಯ ಸಂಕಲ್ಪ ದಿನದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸರ್ವರೂ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಚಿತ್ರದುರ್ಗದ ಚಲುವಾದಿ ಗುರುಪೀಠದ ಹರಳಯ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ರಾಜ್ಯ ಹೈಕೋರ್ಟ ವಕೀಲರಾದ ದೇವಮಿತ್ರ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖಂಡರಾದ ಮಂಜು ಸೈದಾಪುರ, ಮಹಾಂತೇಶಕುಮಾರ ಮಿತ್ರ, ಉಪನ್ಯಾಸಕಿ ಶಕುಂತಲಾ ಹಡಗಿಲ್ ಸೇರಿದಂತೆ ಗಣ್ಯರು ಸಾಹಿತಿಗಳು ವಧುವರರ ಬಂಧುಗಳು ಆಪ್ತರು ಮತ್ತು ಪಾರ್ಟಿ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಹೊಸಮನಿ, ವೀರೇಶ ಕೊಳ್ಳೂರ, ಮಹಾಂತೇಶ ಚಟ್ನಳ್ಳಿ ಸೇರಿದಂತೆ ಇತರರು ಹಾಜರಿದ್ದರು.