ಸಗರದಲ್ಲಿ ಸೋಫಿ ಸರಮತ್ ಜಾತ್ರೆ ಸಂಭ್ರಮ
ಭಾವೈಕ್ಯತೆ ತಾಣ ಸೋಫಿ ಸರಮತ್ ದರ್ಗಾ
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದ ಹೊರವಲಯದಲ್ಲಿರುವ ಹಜರತ್ ಸೋಫಿ ಸರಮತ್ ದರ್ಗಾ ಜಾತ್ರೆ ಸಂಭ್ರಮದಿಂದ ಜರುಗಿತು.
ಗುರುವಾರ ಜಾತ್ರೆ ಹಿನ್ನೆಲೆ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ಹಿಂದೂ ಮುಸ್ಲಿಂ ಯಾವುದೇ ಬೇಧಭಾವವಿಲ್ಲದ ಜಾತ್ರೆಯಲ್ಲಿ ಜನಜಂಗುಳಿಯೇ ಸೇರಿತ್ತು.
ಬೆಳಗ್ಗೆಯಿಂದಲೇ ದರ್ಗಾಕ್ಕೆ ಹೂವು, ಕಾಯಿ ಕರ್ಪೂರ ಧೂಪ ಸಮರ್ಪಿಸಿ ದರ್ಶನ ಪಡೆಯುತ್ತಿದ್ದರು. ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಜನರು ಸಂಪ್ರದಾಯದಂತೆ ಮಾದ್ಲಿ ಸಿಹಿ ತಿಂಡಿ ನೈವೇದ್ಯ, ಗಲೀಫ್ ಮತ್ತು ಹೂವಿನ ಚಾದಾರ ಅರ್ಪಿಸಿ ದರ್ಶನ ಪಡೆಯುತ್ತಿರುವುದು ಕಂಡು ಬಂದಿತು.
ಅಲ್ಲದೆ 200 ಕ್ಕೂ ಹಿಂದೂ ಜನರು ದೀಡ ನಮಸ್ಕಾರ ಹಾಕಿದರು. ಮುಸ್ಲಿಂ ಭಕ್ತರು ತಮ್ಮ ಸೋಫಿ ಸಂತರಿಗೆ ಹೂವಿನ ಮಾಲೆ, ಚಾದಾರ ವಿಶೇಷವಾಗಿ ಗಂಧದ ಎಣ್ಣೆ ಅರ್ಪಿಸಿ ನಮನಗಳನ್ನು ಸಲ್ಲಿಸಿದರು. ಹಲವಾರು ಜನ ತಮ್ಮ ಹರಕೆಗಳನ್ನು ತೀರಿಸಿದರು.
ನಂತರ ಜಾತ್ರಾ ಅಂಗವಾಗಿ ಪ್ರದೇಶದಲ್ಲಿ ಹಾಕಲಾದ ಸಿಹಿ ತಿಂಡಿ ಅಂಗಡಿಗಳಲ್ಲಿ ಭಜಿ, ಜಿಲೇಬಿ ಸೇರಿದಂತೆ ಸಿಹಿ ಉಚಿಡಿ, ಪಳಾರ ಸವಿದರು. ಒಂದು ವಆರ ನಡೆಯವು ಈ ಜಾತ್ರೆಯಲ್ಲಿ ಹಲವಾರು ಆಟಿಕೆ ವಿವಿಧ ಸಾಮಾಗ್ರಿಗಳ ಮಾರಾಟ ಅಂಗಡಿಗಳು ಇರುವದರಿಂದ ಜನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ಮೂಲ ಶ್ರೀದರ್ಗಾದ ದರ್ಶನ ಪಡೆದು ಧನ್ಯತಾ ಭಾವ ಅರ್ಪಿಸುತ್ತಿದ್ದಾರೆ. ಸೋಫಿ ಸರಮತ್ ದರ್ಗಾ ದರ್ಶನ ಪಡೆಯಲು ಭಕ್ತರು ಆಂದ್ರ, ಮಹಾರಾಷ್ಟ್ರ ಸೇರಿದಂತೆ ಕಲಬುರ್ಗಿ, ರಾಯಚೂರ ಮತ್ತು ವಿಜಯವಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.