ಅಪ್ಪು ಕನಸಿನ “ಗಂಧದ ಗುಡಿ” ಟೀಸರ್ ಬಿಡುಗಡೆ

ಅಪ್ಪು ಕನಸಿನ “ಗಂಧದ ಗುಡಿ” ಟೀಸರ್ ಬಿಡುಗಡೆ
ಅಪ್ಪು ಕನಸಿನ ಸಾಕ್ಷ್ಯ ಚಿತ್ರ ರಿಲೀಸ್
ವಿವಿ ಡೆಸ್ಕ್ಃ ನಟ ಪುನೀತ್ ಕನಸಿನ ಗಂಧದ ಗುಡಿ ಟೀಸರ್ ಇಂದು ಬಿಡುಗಡೆ ಮಾಡಲಾಗಿದ್ದು, ಕರುನಾಡಿನ ಕಾನನದ ಮಧ್ಯ ಸಾಕ್ಷ್ಯ ಚಿತ್ರ ಅದ್ದೂರಿಯಾಗಿ ಮೂಡಿ ಬಂದಿದೆ.
ಇಂದು ಪುನೀತ್ ರಾಜಕುಮಾರ ಅವರ ತಾಯಿ ಪಾರ್ವತಮ್ಮ ರಾಜಕುಮಾರ ಅವರ ಜನ್ಮ ದಿನವಾದ ಹಿನ್ನೆಲೆ ಇಂದು ಪುನೀತ್ ಅವರ ಪತ್ನಿ ಅಶ್ವಿನಿ ಅವರು ಅಭಿಮಾನಿಗಳಿಗೆ ಮುಂದಿಟ್ಟಿದ್ದಾರೆ.
ಅಪ್ಪು ಇಲ್ಲದ ಅವರ ಡಾಕ್ಯುಮೆಂಟ್ ನೋಡಿ ಅಭಿಮಾನಿಗಳು ಮತ್ತು ಕುಟುಂಬದವರು ಕಣ್ಣೀರಾಕುತ್ತಿದ್ದಾರೆ. ಕರುನಾಡಿನ ದಟ್ಟ ಕಾಡಿನಲ್ಲಿ, ಈ ಸಾಕ್ಷ್ಯ ಚಿತ್ರ ಮಾಡಲಾಗಿದ್ದು, ಸ್ವತಃ ಅಪ್ಪು ಅವರು, ಸಮುದ್ರದ ಆಳಕ್ಕೂ ಇಳಿಯುವ ಮೂಲಕ ಸಾಹಸ ಮೆರೆದಿದ್ದರು.
ಅವರ ಅನುಭವ ಹಂಚಿಕೊಳ್ಳುವ ಮುನ್ನ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿರುವದೇ ದುರಂತ.
ಪುನೀತ್ ಇದ್ದಿದ್ದರೆ ಟೀಸರ್ ಬಿಡುಗಡೆ ಸಂಭ್ರಮದಲ್ಲಿ ಇರುತ್ತಿದ್ದರು. ಅವರ ಮುಗ್ಧ ನಗುವಿನೊಂದಿಗೆ ಗಂಧದ ಗುಡಿ ಸಾಕ್ಷ್ಯ ಚಿತ್ರ ಅನುಭವ ನಮ್ಮೆಲ್ಲರ ಮುಂದಿಡುತ್ತಿದ್ದರು. ಇಂದು ಅವರಿಲ್ಲ ಅಂದ್ರೂ ಅವರ ಶ್ರಮ, ಅವರ ಕಲ್ಪನೆ ಅದ್ಭುತವಾಗಿ ಸಾಕ್ಷ್ಯ ಚಿತ್ರದಲ್ಲಿ ಜೀವಂತವಾಗಿ ಉಳಿದಿದ್ದಾರೆ.
ಅವರು ಮಾಡಿರುವ ಸಾಮಾಜಿಕ ಕಾರ್ಯ ನಿತ್ಯ ನೆನಪಿಸುತ್ತಿವೆ. ಈ ಸಾಕ್ಷ್ಯ ಚಿತ್ರವೂ ಅವರ ಇಷ್ಟದ ಕೊನೆಯ ಸಾಕ್ಷ್ಯ ಚಿತ್ರವಾಗಿದ್ದು, ಕರುನಾಡಿನ ಕಾಡಿನ ಸೊಬಗುಹಸಿರು ಸೊಗಡು ಇದರಲ್ಲಿ ಅಮೋಘವಾಗಿ ಸೆರೆ ಹಿಡಿಯಲಾಗಿದೆ.
ಇದನ್ನು ನೋಡಿದ ಎಲ್ಲರೂ ಕಣ್ಣೀರಾಕುತ್ತಿದ್ದು, ಪುನೀತ್ ಅವರು ಕನ್ನಡ ನಾಡಿನ ಪ್ರಕೃತಿ ಸೌಂದರ್ಯ ಕುರಿತು ಸೆರೆ ಹಿಡಿದಿರುವದು ರೋಮಾಂಚನ ಮೂಡಿಸುತ್ತಿದೆ.
ನ.1 ಕ್ಕೆ ಈ ಟೀಸರ್ ಬಿಡುಗಡೆಯಾಗಬೇಕಿತ್ತು ನಾಡಿನ ಜನರಿಗೆ ರಸದೌತಣ ನೀಡುವ ಉದ್ದೇಶ ಹೊಂದಿದ್ದ ಅಪ್ಪು ದುರದೃಷ್ಟವಶಾತ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.