ಭಾರತದ ವಿರುದ್ಧ ಮಾತಾಡಿದ್ದ ನೇಪಾಳ ಪ್ರಧಾನಿ ಒಲಿ ರಾಜೀನಾಮೆ ಯಾಕೆ ಗೊತ್ತೆ.?
ಭಾರತದ ವಿರುದ್ಧ ಮಾತಾಡಿದ್ದ ನೇಪಾಳ ಪ್ರಧಾನಿ ಒಲಿ ರಾಜೀನಾಮೆ ಯಾಕೆ ಗೊತ್ತೆ.?
ನೇಪಾಳಃ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಪ್ರಧಾನಿ ಹುದ್ದೆಗೆ ಇಂದು ರಾಜೀನಾಮೆ ನೀಡಿ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮ ದೇಶದ ಭೂಪಟ ಬದಲಾವಣೆ ಮಾಡುವಾಗ ಭಾರತದ ಭಾಗವನ್ನು ಸೇರಿಸಿಕೊಂಡಿರುವ ಕುರಿತು ಅಲ್ಲಿನ ರಾಜಕೀಯ ಪಕ್ಷಗಳಿಂದ ತೀವ್ರ. ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ಅಲ್ಲದೆ ನೇಪಾಳದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದ ಮಾಜಿ ಪ್ರಧಾನಿ ಪುಷ್ಪ ಕಮಲ್ ದಹಲ್ ಬಣವು ಒಲಿ ವಿರುದ್ಧ ಕಿಡಿಕಾರಿದೆ ಎನ್ನಲಾಗಿದೆ. ಒಟ್ಟು 44 ಸ್ಥಾಯಿ ಸಮಿತಿ ಸದಸ್ಯರಲ್ಲಿ 31 ಜನ ಒಲಿ ವಿರುದ್ಧ ನಿಂತಿರುವದು ಇದೇ ಮೊದಲು ಎಂದು ನೇಪಾಳ ಮಾಧ್ಯಮಗಳು ವರದಿ ಮಾಡಿವೆ.
ಅಲ್ಲದೆ ಮುಖಂಡರಾದ ಜಲಾನಾಥ ಖನಾಲ್ ಮತ್ತು ಬಾಂದೇವ್ ಗೌತಮ್‌ಸೇರಿದಂತೆ ಹಿರಿಯ ನಾಯಕರು ಪ್ರಧಾನಿ ಒಲಿ ವೈಫಲ್ಯತೆ ಉಲ್ಲೇಖಿಸಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮತ್ತು ಪ್ರಧಾನಿ ಹುದ್ದೆಯಿಂದ ನನ್ನನ್ನು ಕೆಳಗಿಳಿಸುವ ಷಡ್ಯಂತ್ರ ರೂಪಿಸಲಾಗಿದೆ ಎಂದು ವಲಿ ಅವರು ಆರೋಪಿಸಿದ್ದರು. ಭಾರತದ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ ನೇಪಾಳ ಪ್ರಧಾನಿ ಒಲಿ ವಿರುದ್ಧ ಅಲ್ಲಿನ ವಿಪಕ್ಷ ಸೇರಿದಂತೆ ಆಡಳಿತಾರೂಢ ಪಕ್ಷದ ಮುಖಂಡರು ಸಹ ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎನ್‌ಲಾಗಿದೆ.