ಶಹಾಪುರಃ ಚಾಮುಂಡಿ ಬಡಾವಣೆಯಲ್ಲಿ ಬಿಜೆಪಿ ಅಭಿಯಾನ
ಚಾಮುಂಡಿ ಬಡಾವಣೆಯಲ್ಲಿ ಬಿಜೆಪಿ ಅಭಿಯಾನ
ಶಹಾಪುರಃ ಕೇಂದ್ರದ ಮೋದಿ ನೇತೃತ್ವದ ಎರಡನೆ ಬಾರಿಯ ಬಿಜೆಪಿ ಸರ್ಕಾರದ ಮೊದಲನೇ ವರ್ಷ ಪೂರೈಸಿರುವ ಹಿನ್ನೆಲೆ ನಗರ ಬಿಜೆಪಿ ಘಟಕದಿಂದ ಮನೆ ಮನೆಗೆ ತೆರಳಿ ಸಾಧನ ಕರಪತ್ರಗಳನ್ನು ವಿತರಿಸಿದರು.
ರಾಜ್ಯ ಬಿಜೆಪಿ ಘಟಕದ ಆದೇಶದ ಮೇರೆಗೆ ಶುಕ್ರವಾರ ನಗರದ ಚಾಮುಂಡಿ ಬಡಾವಣೆಯಲ್ಲಿ ಬಿಜೆಪಿ ಅಭಿಯಾನಕ್ಕೆ ಚಾಲನೆ ನೀಡಿ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಘಟಕ ಬಿಜೆಪಿ ಅಧ್ಯಕ್ಷ ದೇವು ಕೋನೇರ, ಪ್ರಧಾನಿ ಮೋದಿಜೀಯವರು ಜನಪರ ಯೋಜನೆಗಳು ಜಾರಿಗೆ ತಂದಿದ್ದು, ಭಾರತೀಯ ಜನಮಾನಸದಲ್ಲಿ ಹೆಸರು ಮಾಡಿದ ಧಿಮಂತ ನಾಯಕರಾಗಿದ್ದಾರೆ. ಕೊರೊನಾ ಸಂಕಷ್ಟದ ಸ್ಥಿತಿಯಲ್ಲೂ ಪ್ರಧಾನಿಯವರು ಎದೆಗುಂದದೆ ಕಾಳಜಿಪೂರ್ವಕವಾಗಿ ದೇಶ, ಜನತೆಯ ರಕ್ಷಣೆ ಮಾಡುವಲ್ಲಿ ಜಗತ್ತಿನಲ್ಲಿಯೇ ಪ್ರಮುಖರಾಗಿದ್ದಾರೆ. ಅಲ್ಲದೆ ಇಡಿ ವಿಶ್ವವೇ ನನ್ನ ಕುಟುಂಬ ಎಂದು ಹೇಳುವ ಜೊತೆಗೆ ಹಲವು ರಾಷ್ಟ್ರಗಳ ರಕ್ಷಣೆಗೆ ಸಹಕರಿಸುವ ಮೂಲಕ ಪ್ರಪಂಚದಲ್ಲಿಯೇ ಅಗ್ರಗಣ್ಯ ನಾಯಕರೆನಿಸಿದರು.
ಮೋದಿ ಜಿಯವರು ಕಳೆದ 6 ವರ್ಷದಿಂದ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದ್ದು, ಎಲ್ಲೂ ಭ್ರಷ್ಟಾಚಾರದ ಕಪ್ಪು ಚುಕ್ಕೆ ಬೀಳದಂತೆ, ಪಾರದರ್ಶಕ ಆಡಳಿತ ನೀಡುವ ಮೂಲಕ ಮಹಿಳೆಯರು, ವಿದ್ಯಾರ್ಥಿಗಳ ಜೀವನ, ಉದ್ಯೋಗ ಸೃಷ್ಠಿ, ದೇಶದ ರಕ್ಷಣಾ ವ್ಯವಸ್ಥೆ ಸೇರಿದಂತೆ ರೈತಾಪಿ ಜನರಿಗೆ ಅನುಕೂಲ ಇತರೆ ಪ್ರಮುಖ ವಲಯಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಹಲವು ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರು ಕಾಮಾ, ಅಡಿವೆಪ್ಪಾ ಜಾಕಾ, ಮಹ್ಮದ್ ಅಲಿ ಮಕ್ತಾಪುರ, ಸಾಯಬಣ್ಣ ನಾಸಿ, ವಿಶ್ವನಾಥ ಗೌಡಗಾಂವ, ಮಲ್ಲು ಪೊಲೀಸ್ ಇತರರು ಇದ್ದರು.