ಪ್ರಮುಖ ಸುದ್ದಿ

ಹಿರಿಯ ಛಾಯಾಚಿತ್ರಗಾರ ನೆಲೋಗಿ ನಿಧನ

ಖ್ಯಾತ ಛಾಯಾಚಿತ್ರಗಾರ ಮಹಾಲಿಂಗಪ್ಪ ನೆಲೋಗಿ ನಿಧನ

ಶಹಾಪುರಃ ನಗರದ ಖ್ಯಾತ ಹಿರಿಯ ಛಾಯಾಚಿತ್ರಕಾರ ಮಹಾಲಿಂಗಪ್ಪ ನೆಲೋಗಿ (86) ಮಂಗಳವಾರ ಮದ್ಯಾಹ್ನ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಐವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಬುಧವಾರ ಮದ್ಯಾಹ್ನ 12 ಗಂಟೆಗೆ ನಗರದ ರಾಕಂಗೇರಾ ಬಡಾವಣೆಯ ರುದ್ರಭೂಮಿಯಲ್ಲಿ ಅಂತ್ಯಕ್ರೀಯೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಗರನಾಡಿಗೆ ಫೇಮಸ್ ಫೋಟೊಗ್ರಾಫರ್ ಈ ನೆಲೋಗಿ

ಕಪ್ಪು-ಬಿಳಪು ಭಾವಚಿತ್ರ ತೆಗೆದು ನೀರಲ್ಲಿ ತೊಳೆದು ಫೋಟೊ ಕೊಡುವ ಕಾಲವದು. ಆಗಿನ ಸಂದರ್ಭದಲ್ಲಿ ವಿಭಿನ್ನ ರೀತಿಯಲ್ಲಿ ಫೋಟೊ ತೆಗೆಯವು ಮೂಲಕ ಇಡಿ ಸಗರನಾಡಿಗೆ ಸುಪರಿಚಿತರಾಗಿದ್ದ ಛಾಯಾಚಿತ್ರಗಾರ ಮಹಾಲಿಂಗಪ್ಪ ನೆಲೋಗಿ ನಿಧನ ತುಂಬಲಾರದ ನಷ್ಟವಾಗಿದೆ ಎಂದರೆ ತಪ್ಪಾಗಲಾರದು.

ಕಾರಣ ನೆಲೋಗಿ ಕೈಯಲ್ಲಿ ನೂರಾರು ಜನ ಛಾಯಚಿತ್ರಗಾರರಾಗಿ ಹೊರ ಹೊಮ್ಮಿದ್ದಾರೆ. ಅವರ ಕೈಯಲ್ಲಿ ಫೋಟೊಗ್ರಾಫಿ ಕಲೆ ಕಲಿತು ಬದುಕು ಕಟ್ಟಿಕೊಂಡವರು ಸಾಕಷ್ಟು ಜನರಿದ್ದಾರೆ.

ಇಂದಿಗೂ ಈ ಭಾಗದಲ್ಲಿ ಮಹಾಲಿಂಗಪ್ಪ ನೆಲೋಗಿ ಛಾಯಾಚಿತ್ರಗಾರರೆಂದರೆ ರಾಜಕಾರಣಿಗಳು ಸೇರಿದಂತೆ ಗಣ್ಯರು ಹಲವಾರು ಮಠ ಮಾನ್ಯಗಳ ಸ್ವಾಮೀಜಿಗಳಿಗೂ ಯುವ ಸಮುದಾಯಕ್ಕು ಅಚ್ಚುಮೆಚ್ಚು. ಸ್ವತಃ ಆತನ ಮಕ್ಕಳು ಸಹ ಇದೇ ವೃತ್ತಿಯಲ್ಲಿ ಮುಂದುವರೆದಿದ್ದಾರೆ.

ತಮ್ಮ ಕಲೆಯನ್ನು ಅನೇಕರಿಗೆ ಹಂಚಿದ ಮಹಾನ್ ವ್ಯಕ್ತಿತ್ವ ಇವರದು. ಸೌಮ್ಯ ಶಾಂತ ಸ್ವಭಾವ ಹೊಂದಿದ್ದ ಇವರು, ಜೀವನದ ಕೊನೆಗಳಿಗೆಯಲ್ಲೂ ಛಾಯಾಚಿತ್ರ ಕಲೆಯನ್ನು ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆ ನೀಡುವದಲ್ಲದೆ. ಛಾಯಾಚಿತ್ರಗಾರರ ಸಂಘಕ್ಕೆ ಗೌರವ ಸಲಹೆಗಾರರಾಗಿದ್ದರು.

ಅಲ್ಲದೆ ವೃತ್ತಿ ಜೊತೆಗೆ ಹೋಮಗಾರ್ಡ್ ಸಂಸ್ಥೆಯಲ್ಲಿ ಸೇರಿಕೊಂಡು ಶಿಸ್ತಿನ ಸಿಪಾಯಿಯಂತೆ ಸೇವೆ ಸಲ್ಲಿಸಿದ ಕೀರ್ತಿಯವರದು, ಸಮರ್ಪಕವಾಗಿ ಎರಡು ಕರ್ತವ್ಯ ನಿಭಾಯಿಸುವ ವ್ಯಕ್ತಿ ನೆಲೋಗಿ.

ಆತನ ವೇಷಭೂಷಣ ಸಮೇತ ವೃತ್ತಿಯಲ್ಲಿ ಶಿಸ್ತು ರೂಢಿಸಿಕೊಂಡ ಮಹಾಲಿಂಗಪ್ಪ ನೆಲೋಗಿ ಎಂದಿಗೂ ವೃತ್ತಿಯಲ್ಲಿ ದ್ರೋಹ ಬಗೆದವರಲ್ಲ. ತನ್ನ ಕೆಲಸದಲ್ಲಿ ಮಗ್ನರಾದರೆ ಮುಗೀತು ಪರಿಪೂರ್ಣವಾಗಿ ಕೆಲಸ ಮುಗಿಯುವವರೆಗೂ ಅದರಿಂದ ಹೊರ ಬರುತ್ತಿರಲಿಲ್ಲ.

ಅಲ್ಲದೆ ದುಡ್ಡಿನ ಆಸೆಗಾಗಿ ಅವರು ತಮ್ಮ ಕಲೆಯನ್ನು ಪ್ರದರ್ಶಿಸಲಿಲ್ಲ. ತಾವೂ ತೆಗೆದ ಫೋಟೊ ಉತ್ತಮವಾಗಿ ಬರದೆ ಇದ್ದಲ್ಲಿ ಅದನ್ನು ಮತ್ತೊಮ್ಮೆ ಮಗದೊಮ್ಮೆ ತೆಗೆಯುವ ವ್ಯಕ್ತಿತ್ವ ಅವರದು. ಅವರು ತೆಗೆದ ಭಾವಚಿತ್ರಕ್ಕೆ ಪಡೆಯುವ ದುಡ್ಡಿನ ಮೇಲೆ ಎಂದಿಗೂ ಆಸೆ ಪಟ್ಟವರಲ್ಲ. ತಾ ಮಾಡುವ ಕೆಲಸದಲ್ಲಿ ಶ್ರದ್ಧೆ ಅತ್ಯಗತ್ಯ ಎಂದು ನಂಬಿದ್ದ ವ್ಯಕ್ತಿ.

ಇಂತಹ ವ್ಯಕ್ತಿಯ ವಯೋಸಾವು ಸಂಭವಿಸಿರುವುದು ನಗರದಲ್ಲಿ ಸಾಕಷ್ಟು ಜನರಲ್ಲಿ ನೋವು ಉಂಟು ಮಾಡಿದೆ. ಅವರ ಸೇವೆ ಶಹಾಪುರ ಮಾತ್ರವಲ್ಲದೆ ಸಗರನಾಡಿಗೂ ಹಬ್ಬಿತ್ತು. ನೆಲೋಗಿಯವರಿಂದ ಛಾಯಾಚಿತ್ರ ತೆಗೆಯುವ ಕಲೆ ಕಲಿತುಕೊಂಡ ನೂರಾರು ಯುವಕರು ಇಂದು ಅದೇ ವೃತ್ತಿಯಿಂದ ಬದುಕು ಕಟ್ಟಿಕೊಂಡಿರುವುದು ನಿಜಕ್ಕೂ ನೆಲೋಗಿಯವರ ಸೇವಾ ಮನೋಭಾವಕ್ಕೆ ಹಿಡಿದ ಸಾಕ್ಷಿಯಾಗಿದೆ. ಆ ಕಾರಣದಿಂದಲೇ ನೆಲೋಗಿ ಫೋಟೊ ಸ್ಟುಟಿಯೋ ಎಂದರೆ ಈ ಭಾಗದಲ್ಲಿ ಮೊದಲಿಂದಲೂ ಫೇಮಸ್. ಪ್ರಸಕ್ತ ಕಿರಿಯ ಮಗ ರವಿ ನೆಲೋಗಿ ಅದೇ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ತಮ್ಮ ವೃತ್ತಿಯ ಸುಳಿವು ಬಿಟ್ಟು ಕೊಡದವರನ್ನು ಸಾಕಷ್ಟು ಜನರನ್ನು ಕಾಣುತ್ತೇವೆ. ಅಂತವರಲ್ಲಿ ನೆಲೋಗಿಯವರು ವಿಭಿನ್ನ, ಉತ್ತಮ ವ್ಯಕ್ತಿತ್ವ ಹೊಂದಿರುವುದು ತಿಳಿದು ಬರುತ್ತದೆ.
ನೆಲೋಗಿ ಅವರ ಆತ್ಮಕ್ಕೆ ಆ ದೇವರೂ ಶಾಂತಿ ಕಲ್ಪಿಸಲಿ ಓಂ ಶಾಂತಿ ಶಾಂತಿ ಶಾಂತಿ ಹೀ…

Related Articles

Leave a Reply

Your email address will not be published. Required fields are marked *

Back to top button