ಕಾಲುವೆಗೆ ನೀರು ಹರಿಸುವಂತೆ ಬಿಜೆಪಿ ಆಗ್ರಹ
ಕಾಲುವೆಗೆ ನೀರು ಹರಿಸುವಂತೆ ಬಿಜೆಪಿ ರೈತ ಮೋರ್ಚಾ ಆಗ್ರಹ
ಯಾದಗಿರಿ, ಶಹಾಪುರ: ಸಮರ್ಪಕ ಮಳೆಯಾಗದೆ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬೇಸಿಗೆ ಪ್ರಖರತೆ ಅನುಭವ ಆರಂಭದ ದಿನದಲ್ಲೆ ಕಂಡು ಬರುತ್ತಿದ್ದು, ಆಣೆಕಟ್ಟಿನಲ್ಲಿ ಸಂಗ್ರಹವಿರುವ ನೀರನ್ನು ತಕ್ಷಣವೇ ಕಾಲುವೆಗೆ ಹರಿಸುವ ಮೂಲಕ ಜನರಿಗೆ ಮತ್ತು ಜಾನುವಾರುಗಳಿಗೆ ಅನುಕೂಲ ಕಲ್ಪಿಸಬೇಕೆಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಯ್ಯ ನಾಯಕ ಮನವಿ ಮಾಡಿದ್ದಾರೆ.
ಭಿ.ಗುಡಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರಿಗೆ ರೈತರ ನಿಯೋಗದೊಂದಿಗೆ ತೆರಳಿ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದ ಅವರು, ನೀರಿನ ಕೊರತೆಯಿಂದ ಹಿಂಗಾರು ಹಂಗಾಮಿನಲ್ಲಿ ಒಂದೇ ಬೆಳೆಗೆ ನೀರು ಹರಿಸಲಾಯಿತು. ಆದರೆ ರೈತ ಸಮುದಾಯದ ಸಮಸ್ಯೆಯನ್ನು ಅರಿತು ಇನ್ನೊಂದು ಬೆÉಳೆಯ ಪ್ರಯತ್ನಕ್ಕೆ ಮುಂದುವರೆಯಲಿಲ್ಲ.
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಆಣೆಕಟ್ಟಿನಲ್ಲಿ ನೀರು ಕಾಯ್ದಿರಿಸಲಾಗಿದ್ದು, ತಕ್ಷಣವೆ ಕಾಲುವೆಗೆ ನೀರು ಹರಿಸಿದರೆ ಕೆರೆ, ಹಳ್ಳ, ಕೊಳ್ಳಗಳಲ್ಲಿ ನೀರು ಸಂಗ್ರಹವಾಗಿ ಸ್ವಲ್ಪ ಪ್ರಮಾಣದ ಅನುಕೂಲ ವಾಗಲಿದೆ. ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಈ ಕುರಿತು ಕಾಳಜಿವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಣಮಂತ್ರಾವ್ ಕುಲ್ಕರ್ಣಿ ಐಕೂರ, ಶಾಂತಗೌಡ ದಿಗ್ಗಿ, ಸುಭಾಷ, ಸೊಲಬಣ್ಣ ಆನೇಗುಂದಿ, ಮಹಾಂತಗೌಡ, ಬೈಲಪ್ಪ ದೊರಿ, ಶಾಂತಯ್ಯ ಸ್ವಾಮಿ, ರಂಗಣ್ಣ ದೊರಿ ಇತರರಿದ್ದರು.