ಪ್ರಮುಖ ಸುದ್ದಿ
‘ಟಗರು’ ಸಿನೆಮಾ ಆಡಿಯೋ ಬಿಡುಗಡೆ : ‘ಅಭಿಮಾನಿ ಟಗರಿಗೆ’ ಲಾಠಿ ಏಟು!
ಬಳ್ಳಾರಿ: ಹೊಸಪೇಟೆಯ ಕಾಲೇಜು ಆವರಣದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಅಭಿನಯದ ಟಗರು ಸಿನೆಮಾ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬಹು ನಿರೀಕ್ಷಿತ ಟಗರು ಸಿನೆಮಾ ಆರಂಭದಲ್ಲೇ ರಾಜ್ಯದಾದ್ಯಂತ ಧೂಳೆಬ್ಬಿಸಿದೆ. ಅಂತೆಯೇ ನಟ ಶಿವರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಹ ಇಂದು ಟಗರು ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ನೆಚ್ಚಿನ ನಟರನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿದೆ. ಅದ್ಧೂರಿ ವೇದಿಕೆಯಲ್ಲಿ ಜನಜಾತ್ರೆಯ ನಡುವೆ ಟಗರು ಸಿನೆಮಾದ ಆಡಿಯೋ ಬಿಡುಗಡೆ ಆಗಿದೆ. ನೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ತಾಮುಂದು ನಾಮುಂದು ಅಂತ ಟಗರುಗಳಂತೆ ನುಗ್ಗಿದ್ದಾರೆ. ಪರಿಣಾಮ ನೂಕು ನುಗ್ಗುಲು ಉಂಟಾಗಿದೆ. ಹೀಗಾಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲವರಿಗೆ ಲಾಠಿರುಚಿ ತೋರಿಸಿದ್ದಾರೆ.