ಪ್ರಮುಖ ಸುದ್ದಿ
‘ತಲವಾರ್ ಶರಣ’ : ಜನುಮ ದಿನ ಆಚರಣೆ ವೇಳೆ ತಲವಾರ್ ಪ್ರದರ್ಶನ!!!
ಕಲಬುರಗಿ: ಜೇವರಗಿ ಪಟ್ಟಣದ ಬಿಜೆಪಿ ಯುವ ಮುಖಂಡ ಎನ್ನಲಾಗಿರುವ ಶರಣು ಕೋಳಕೂರ್ ಎಂಬುವರ ಜನುಮ ದಿನ ಆಚರಣೆ ಸಂದರ್ಭದಲ್ಲಿ ತಲವಾರ್ ನಿಂದ ಕೇಕ್ ಕತ್ತರಿಸಲಾಗಿದೆ. ಕೆಲವರು ತಲವಾರ್ ಹಿಡಿದ ಶರಣು ಜತೆ ಫೋಸ್ ಕೊಟ್ಟರೆ ಇನ್ನೂ ಕೆಲವರು ತಾವೂ ಸಹ ತಲವಾರ್ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಎರಡು ದಿನಗಳ ಹಿಂದೆ ಜೇವರಗಿ ಪಟ್ಟಣದಲ್ಲಿ ನಡೆದಿದೆ ಎನ್ನಲಾದ ಬರ್ತಡೇ ಸೆಲೆಬ್ರೇಷನ್ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಂಭ್ರಮ, ಸಡಗರದಿಂದ ಆಚರಿಸುವ ಜನ್ಮದಿನ ಆಚರಣೆ ವೇಳೆ ತಲವಾರ್ ಬಳಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲಿಸಿ ತಲವಾರ್ ಪ್ರದರ್ಶನದ ಕಾರಣ ಮತ್ತು ಸತ್ಯಾಸತ್ಯತೆ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ಜನರ ಆಗ್ರಹವಾಗಿದೆ.