ಪ್ರಮುಖ ಸುದ್ದಿ

ತಳವಾರ ಪರಿವಾರಕ್ಕೆ ST ಪ್ರಮಾಣ ಪತ್ರ ನೀಡಲು‌ ಮನವಿ

ತಳವಾರ ಪರಿವಾರಕ್ಕೆ ST ಪ್ರಮಾಣ ಪತ್ರ ನೀಡಲು‌ ಮನವಿ.

ಶಹಾಪುರಃ ತಳವಾರ ಪರಿವಾರಕ್ಕೆ ಎಸ್.ಟಿ. ಪ್ರಮಾಣ ಪತ್ರ ನೀಡಲು ತಾರತಮ್ಯ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಇಲ್ಲಿನ ತಳವಾರ ಪರಿವಾರ ಸಮಿತಿ‌ ಬಿಜೆಪಿ‌ ರಾಜ್ಯಧ್ಯಕ್ಷ‌ ನಳೀನಕುಮಾರ ಕಟೀಲು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಗೆ ಆಗಮಿಸಿದ ನಳೀನಕುಮಾರ ಕಟೀಲು ಅವರನ್ನು ಭೇಟಿ ಮಾಡಿದ ಸಮಿತಿ ತಳವಾರ ಪರಿವಾರಕ್ಕೆ ಎಸ್.ಟಿ. ಪ್ರಮಾಣ ಪತ್ರ ನೀಡಿದೆ ಅನ್ಯಾಯ ಮಾಡಲಾಗುತ್ತಿದೆ. ತಳವಾರ ಸಮುದಾಯ ಸೌಲಭ್ಯದಿಂದ ವಂಚಿತಗೊಂಡಿದೆ.

ಈ ಕುರಿತು ಹಲವಡೆ ತಳವಾರ ಪರಿವಾರಕ್ಕೆ ಪ್ರಮಾಣ ಪತ್ರ‌ ನೀಡುಲಾಗುತ್ತಿದೆ. ಕಲಬುರ್ಗಿ, ಯಾದಗಿರಿ ಸೇರಿದಂತೆ ಇತರೆ ಜಿಲ್ಲೆಯಲ್ಲಿ ಎಸ್‌.ಟಿ. ಪ್ರಮಾಣ ಪತ್ರ ನೀಡುವಂತೆ ಅಧಿಕಾರಿಗಳಿಗೆ ಮುಖ್ಯ ಮಂತ್ರಿಗಳಿಂದ ನಿರ್ದೇಶನ ನೀಡಿಸಬೆಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಯಪ್ಪ ಸಾಲಿಮನಿ, ಭೀಮಣ್ಣ ಶಖಾಪುರ, ವೆಂಕಟೇಶ ನಾಯ್ಕೋಡಿ, ಸಚಿನ್ ನಾಶಿ, ರವಿ ಹಯ್ಯಾಳಕರ್, ಬಸವರಾಜ ಚಂಡು ರತ್ತಾಳ, ಬಸನಗೌಡ ಪಾಟೀಲ್ ರಾಕಂಗೇರಾ‌, ಭೀಮರಾಯ ಕೋಲಕಾರ, ಅಮರೇಶ ಬಿಜಾಪುರ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button