ಪ್ರಮುಖ ಸುದ್ದಿ
ಶಹಾಪುರಃ ಟಂಟಂ ಪಲ್ಟಿ ಮಹಿಳೆ ಸಾವು
ಯಾದಗಿರಿ,ಶಹಪುರಃ ತಾಲೂಕಿನ ವಿಭೂತಿಹಳ್ಳಿ ಗ್ರಾಮಕ್ಕೆ ಶವ ಸಂಸ್ಕಾರಕ್ಕೆAದು ಟಂಟ ಆಟೋದಲ್ಲಿ ಹೊರಟಿದ್ದಾಗ ನಗರದ ಮಾರ್ಗ ಮಧ್ಯೆ ಚಾಂದ್ ಪೆಟ್ರೋಲ್ ಬಂಕ್ ಹತ್ತಿರ ಟಂಟಂ ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಕಾಶಿಬಾಯಿ ಗಂಡ ಶಿವಣ್ಣ (೫೫) ಸಾ.ಯಾಳಗಿ. ಘಟನೆಯಲ್ಲಿ ಮೃತಪಟ್ಟಿದ್ದಾಳೆ. ಸಿದ್ರಾಮವ್ವ ಗಂಡ ಸಿದ್ದಪ್ಪ ಮತ್ತು ಟಂಟಂ ಚಾಲಕ ಗಾಯಗೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಮಹಿಳೆ ಮೂಲತಃ ಸುರಪುರ ತಾಲೂಕಿನ ಯಾಳಗಿ ಗ್ರಾಮದವರಾಗಿದ್ದು, ಶಹಾಪುರ ಬಸ್ ನಿಲ್ದಾಣದಲ್ಲಿ ಇಳಿದು, ವಿಭೂತಿಹಳ್ಳಿಗೆ ಟಂಟA ನಲ್ಲಿ ಹೊರಟಿದ್ದಾಗ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.